CONNECT WITH US  

ಸ್ವಮೇಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ 'ಕಿಚ್ಚ ಸುದೀಪ್'

ಬಹುಭಾಷಾ ತಾರೆಯಾಗಿ ಮಿಂಚುತ್ತಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡದಲ್ಲಿ ಸ್ವಮೇಕ್ ಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂದು ಕೆಲ ಮೂಲಗಳು ಹೇಳಿಕೊಂಡಿದೆ.

ಸದ್ಯ ಕೋಟಿಗೊಬ್ಬ2 ಚಿತ್ರದಲ್ಲಿ ತೊಡಗಿಸಿಕೊಂಡಿರುವ ಅಭಿನಯ ಚಕ್ರವರ್ತಿ ನಿರ್ದೇಶಿಸಲಿರುವ ಚಿತ್ರವು 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಮುಂದುವರಿದ ಭಾಗ ಎಂದು ಹೇಳಲಾಗಿದೆ.

ಕಿಚ್ಚ ಸುದೀಪ್ 'ಮಾಣಿಕ್ಯ' ಚಿತ್ರ ಸೇರಿದಂತೆ ಒಟ್ಟು 6 ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಅವುಗಳಲ್ಲಿ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರವನ್ನು ಬಿಟ್ಟು ಉಳಿದವೆಲ್ಲವೂ ರಿಮೇಕ್ ರಿಮೇಕ್ ಚಿತ್ರಗಳಾಗಿತ್ತು.

ಈಗ ಅದರ ಮುಂದುವರಿದ ಭಾಗವಾದ 'ಜಸ್ಟ್ ಮಾತ್ ಮಾತಲ್ಲಿ2' ಚಿತ್ರವನ್ನು ಕೈಗೆತ್ತಿಕೊಳ್ಳುವ ನಿರ್ಧಾರ ಮಾಡಿದ್ದಾರಂತೆ ಕನ್ನಡದ ಬಿಗ್ ಬಾಸ್.

ಸದ್ಯ ಬ್ಯೂಸಿ ಶೆಡ್ಯೂಲ್ ಹೊಂದಿರುವ ಕಿಚ್ಚ ಸುದೀಪ್'ರ ತಂಡ ಜಸ್ಟ್ ಮಾತ್ ಮಾತಲ್ಲಿ2 ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ರಘು ದೀಕ್ಷಿತ್'ರ ಬ್ಯೂಟಿಫುಲ್ ಸಂಗೀತದಿಂದ ಮೋಡಿ ಮಾಡಿದ್ದ 2010ರ ಜಸ್ಟ್ ಮಾತ್ ಮಾತಲ್ಲಿ ಚಿತ್ರವು ಬಾಕ್ಸಾಫೀಸ್'ನಲ್ಲಿ ಸಾಧಾರಣ ಯಶಸ್ಸುಗಳಿಸಿತ್ತು.

 'ಕೆಂಪೇಗೌಡ', 'ಮಾಣಿಕ್ಯ'ದಂತಹ ಭರ್ಜರಿ ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಬಾಕ್ಸಾಫೀಸ್'ನಲ್ಲಿ ಹವಾ ಎಬ್ಬಿಸಿರುವ ಕಿಚ್ಚ ಸುದೀಪ್ ಮತ್ತೆ ಸ್ವಮೇಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಸಿನಿಪ್ರೇಕ್ಷಕರಲ್ಲಿ ಮತ್ತಷ್ಟು ನಿರೀಕ್ಷೆ ಮೂಡುವಂತೆ ಮಾಡಿದೆ.

-ಕಪ್ಪು ಮೂಗುತ್ತಿ

Trending videos

Back to Top