CONNECT WITH US  

ಒಂದು ಬದುಕಿನ ದುರಂತ ಕಥೆ ; 'ರಿಕ್ಕಿ' ಚಿತ್ರದ ಭರ್ಜರಿ ಟ್ರೈಲರ್ ಔಟ್

ಸ್ಯಾಂಡಲ್ ವುಡ್'ನ ಭರವಸೆಯ ನಾಯಕ ನಟ ರಕ್ಷಿತ್ ಶೆಟ್ಟಿ ಅಭಿನಯದ ರಿಕ್ಕಿ ಚಿತ್ರದ ಟ್ರೈಲರ್ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿರುವ ಈ ಚಿತ್ರವು ನಕ್ಸಲಿಸಂ ಹಾಗೂ ಸುಂದರ ಪ್ರೇಮ ಕಾವ್ಯದ ಕಥೆ ಹೊಂದಿದೆ ಎನ್ನಲಾಗಿದೆ. ರಿಕ್ಕಿಯಲ್ಲಿ ರಕ್ಷಿತ್'ಗೆ ನಾಯಕಿಯಾಗಿ ಹರಿಪ್ರಿಯ ಕಾಣಿಸಿಕೊಂಡಿದ್ದಾರೆ.

ಎಸ್.ವಿ ಬಾಬು ನಿರ್ಮಿಸಿರುವ ಈ ಚಿತ್ರಕ್ಕೆ ಸಂಗೀತ ನೀಡಿರುವ ಅರ್ಜುನ್ ಜನ್ಯರ ಟ್ಯೂನ್'ಗಳು ಟ್ರೈಲರ್'ನಲ್ಲೇ ಪ್ರೇಕ್ಷಕರಿಗೆ ಮುದ ನೀಡಿದೆ.

ರಿಕ್ಕಿ ಚಿತ್ರದ ಕೆಲ ಸನ್ನಿವೇಶಗಳಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬ್ಯಾಕ್ರೌಂಡ್ ವಾಯ್ಸ್ ನೀಡಿದ್ದು ಚಿತ್ರವು ಅತೀ ಶೀಘ್ರದಲ್ಲೇ ತೆರೆಗೆ ಬರಲಿದೆ.

-ಕಪ್ಪು ಮೂಗುತ್ತಿ

Trending videos

Back to Top