CONNECT WITH US  

'ಬಿಗ್ ಬಾಸ್'ಗೆ ನೋ ಎಂದ ಜೆಕೆ, ರಕ್ಷಿತ್ ಶೆಟ್ಟಿ ಮತ್ತು ನೀನಾಸಂ ಸತೀಶ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡಲಿರುವ ಕನ್ನಡದ ಸೂಪರ್ ಹಿಟ್ ರಿಯಾಲಿಟಿ ಶೋ ಬಿಗ್ ಬಾಸ್-3ನೇ ಭಾಗದಲ್ಲಿ ಯಾರ್ಯಾರು ಇರಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ.

ಈ ಹಿಂದೆ ಸಾಮಾಜಿಕ ತಾಣದಲ್ಲಿ ಹರಿದಾಡಿದ ಬಿಗ್ ಬಾಸ್ ಸೀಸನ್ 3ಯ ಸೆಲೆಬ್ರಿಟಿ ಲಿಸ್ಟ್'ನಲ್ಲಿದ್ದ ನಟ/ನಿರ್ದೇಶಕ ರಕ್ಷಿತ್ ಶೆಟ್ಟಿ ಈ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿತ್ತು.

ಇದರ ಬೆನ್ನಲ್ಲೇ ಹೆಂಗಳೆಯರ ಹಾಟ್ ಫೇವರಿಟ್ ಅಶ್ವಿನಿ ನಕ್ಷತ್ರದ ಸೂಪರ್ ಸ್ಟಾರ್ ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಕೂಡ ಹಿಂದಿ ಸೀರಿಯಲ್'ನಲ್ಲಿ ರಾವಣನಾಗುವ ಸಲುವಾಗಿ ಈ ಶೋನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು.

ಇದೀಗ ಬಂದ ಸುದ್ದಿಯೆಂದರೆ ಕ್ವಾಟ್ಲೆ ಸತೀಶ್ ಕೂಡ ಬ್ಯುಸಿ ಶೆಡ್ಯೂಲ್ ಕಾರಣದಿಂದಾಗಿ ಶೋನಲ್ಲಿ ಭಾಗವಹಿಸಲ್ಲ ಎಂಬುದು. ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳ ಶೂಟಿಂಗ್ ಇದೇ ಸಮಯದಲ್ಲಿ ಇರುವುದರಿಂದ ಲೂಸಿಯಾ ನಾಯಕ ಶೋಗೆ ನೋ ಅಂದಿದ್ದಾರಂತೆ.

ಈ ಜನಪ್ರಿಯ ರಿಯಾಲಿಟಿ ಶೋನಿಂದ ಮೂವರು ಸೆಲೆಬ್ರಿಟಿಗಳು ಹಿಂದೆ ಸರಿದಿದ್ದು ಇವರ ಜಾಗದಲ್ಲಿ ಯಾರು ಎಂಟ್ರಿ ಕೊಡಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

-ಕಪ್ಪು ಮೂಗುತ್ತಿ


Trending videos

Back to Top