CONNECT WITH US  

'ರಣಧೀರ'ನ ಪುತ್ರನನ್ನು 'ಪ್ರೇಮಲೋಕ'ದಲ್ಲಿ ನಿಲ್ಲಿಸಿದ ಯುವ ನಿರ್ದೇಶಕ !

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್'ರವರ ಚೊಚ್ಚಲ ಚಿತ್ರ 'ರಣಧೀರ-ಪ್ರೇಮಲೋಕದಲ್ಲಿ' ವರ್ಷಗಳ ಹಿಂದೆ ಅದ್ಧೂರಿಯಾಗಿ ಸೆಟ್ಟೇರಿತ್ತು.

ಕ್ರೇಜಿಸ್ಟಾರ್ ನಿರ್ದೇಶಿಸುವ ಈ ಚಿತ್ರದಲ್ಲಿ ದರ್ಶನ್, ಸುದೀಪ್, ಅಪ್ಪು ಮೊದಲಾದ ಮಲ್ಟಿಸ್ಟಾರ್ಸ್ ಗೆಸ್ಟ್ ರೋಲ್'ನಲ್ಲಿ ಕಾಣಿಸುತ್ತಾರೆ ಎಂದು ಹೇಳಲಾಗಿತ್ತು.

ಇದೀಗ ಮನೋರಂಜನ್'ರ ಚೊಚ್ಚಲ ಚಿತ್ರ 'ರಣಧೀರ-ಪ್ರೇಮಲೋಕದಲ್ಲಿ' ಮುಂದೂಡಲಾಗಿದೆ. ಆದರೆ ಮನೋರಂಜನ್ ಹೊಸ ಚಿತ್ರದೊಂದಿಗೆ ಸ್ಯಾಂಡಲ್ ವುಡ್'ಗೆ ಶೀಘ್ರದಲ್ಲೇ ಎಂಟ್ರಿ ಕೊಡಲಿದ್ದಾರೆ.

ಕರುನಾಡ ಕನಸುಗಾರ ನಿರ್ದೇಶಿಸಬೇಕಿದ್ದ ಮಗನ ಮೊದಲ ಚಿತ್ರಕ್ಕಿಂತ ಮೊದಲು ಮನೋರಂಜನ್ ಯುವ ನಿರ್ದೇಶಕ ಭರತ್'ರ ಚಿತ್ರದಲ್ಲಿ ನಟಿಸಲಿದ್ದಾರೆ.

ಕಂಠಿ ಚಿತ್ರ ನಿರ್ದೇಶಿಸಿದ್ದ ಭರತ್ ರವಿಮಾಮ ಪುತ್ರನಿಗಾಗಿ ಸಖತ್ ಸ್ಟೋರಿ ರೆಡಿ ಮಾಡಿದ್ದು ಚಿತ್ರಕ್ಕೆ ಕ್ರೇಜಿಸ್ಟಾರ್ ಕೂಡ ಓಕೆ ಅಂದಿದ್ದಾರಂತೆ.

ಚಿತ್ರಕಥೆ ಇಷ್ಟಪಟ್ಟಿರುವ ರವಿಚಂದ್ರನ್ ಮತ್ತು ಮನೋರಂಜನ್ ಚಿತ್ರಪ್ರಾರಂಭಿಸಲು ನಿರ್ದೇಶಕ ಭರತ್'ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಇನ್ನೂ ಹೆಸರಿಡದ ಈ  ಚಿತ್ರವು ಶೀಘ್ರದಲ್ಲೇ ಸೆಟ್ಟೇರಲಿದೆ. ಅಂದಹಾಗೆ ಕ್ರೇಜಿಸ್ಟಾರ್ ಪುತ್ರನ ಸ್ಯಾಂಡಲ್ ವುಡ್ ಎಂಟ್ರಿಗೆ ಯಶಸ್ವಿ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಲಿದ್ದಾರೆ.

ಹೀಗಾಗಿ 'ಮನೋರಂಜನ್'ನೊಂದಿಗಿನ 'ಕನಸುಗಾರನ ಒಂದು ಕನಸು' ನೋಡಲು ಕ್ರೇಜಿಸ್ಟಾರ್ ಅಭಿಮಾನಿಗಳು ಮತ್ತಷ್ಟು ದಿನಗಳು ಕಾಯಬೇಕಾಗಿದೆ.

-ಕಪ್ಪು ಮೂಗುತ್ತಿ

Trending videos

Back to Top