CONNECT WITH US  

ಫೋರ್ಬ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್

ಪ್ರಸಿದ್ಧ ನಿಯತಕಾಲಿಕೆ ಫೋರ್ಬ್ಸ್ ಪ್ರಕಟಿಸುವ 100 ಪ್ರಭಾವಿಗಳ ಪಟ್ಟಿಯಲ್ಲಿ ಸ್ಯಾಂಡಲ್ ವುಡ್'ನ ಹೆಸರಾಂತ ನಟರಾದ ಪುನೀತ್ ರಾಜ್‌ಕುಮಾರ್ ಹಾಗೂ ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ಐವರು ಸ್ಥಾನ ಪಡೆದಿದ್ದಾರೆ.

ಮನರಂಜನೆ, ಕ್ರೀಡೆ ಹಾಗೂ ಉದ್ಯಮಕ್ಕೆ ಸಂಬಂಧಪಟ್ಟಂತೆ ವರ್ಷದ ಪ್ರಭಾವಿ 100 ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ  ಪ್ರಕಟಿಸುತ್ತದೆ.

ಬಾಲಿವುಡ್-ಟಾಲಿವುಡ್-ಕಾಲಿವುಡ್ ಸೆಲೆಬ್ರಿಟಿಗಳ ಹೆಸರುಗಳೇ ಜಾಸ್ತಿ ಕಂಡು ಬರುವ ಈ ಪಟ್ಟಿಯಲ್ಲಿ ಈ ಬಾರಿ ಸ್ಯಾಂಡಲ್‍ವುಡ್‍ನ ಸೆಲೆಬ್ರೆಟಿಗಳಾದ ಪುನೀತ್‍ರಾಜ್‍ಕುಮಾರ್, ಸುದೀಪ್, ರಘು ದೀಕ್ಷೀತ್, ಪ್ರಿಯಾಮಣಿ, ವಿಜಯ್ ಪ್ರಕಾಶ್ ಹೆಸರು ಸೇರ್ಪಡೆಯಾಗಿದೆ. 

ಡಿಸೆಂಬರ್ 11ರಂದು ಫೋರ್ಬ್ಸ್‌ನ 100 ಪ್ರಭಾವಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾಗಲಿದ್ದು, ಅಂದು ಯಾವ ಸ್ಟಾರ್ಸ್ ಯಾವ ಸ್ಥಾನದಲ್ಲಿದ್ದಾರೆ ಎಂಬುದು ತಿಳಿಯಲಿದೆ.

*ಕಪ್ಪು ಮೂಗುತ್ತಿ

Trending videos

Back to Top