CONNECT WITH US  

ಮಾನವೀಯತೆ ಮೆರೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

ಬಾಲಿವುಡ್ - ಕಾಲಿವುಡ್- ಟಾಲಿವುಡ್'ನಲ್ಲಿ ಖ್ಯಾತಿ ಪಡೆದಿರುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಈ ಬಾರಿ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ.

ಪಟಾಕಿ ಹಚ್ಚಿ ಸದ್ದು ಗದ್ದಲ ಮಾಡೋ ಬದಲು ಅಭಿನಯ ಚಕ್ರವರ್ತಿ ಸದ್ದು ಮಾಡದೇ ಚಾರಿಟಿ ಟ್ರಸ್ಟ್'ವೊಂದಕ್ಕೆ 10 ಲಕ್ಷ ರೂ. ನೀಡುವ ಮೂಲಕ ದೀಪಾವಳಿ ಹಬ್ಬದಂದು ಟ್ರಸ್ಟ್ ಪಾಲಿಗೆ ಬೆಳಕಾಗಿದ್ದಾರೆ.

ವಿದ್ಯಾಭ್ಯಾಸದ ಮತ್ತು ಆರೋಗ್ಯ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿರುವ ಸಹಾಯವಾಗಲೆಂದು ಗೌಪ್ಯವಾಗಿ ಕಿಚ್ಚ ನೆರವು ನೀಡಿದ್ದರು. 

ಬೆಳ್ಳಿಪರದೆ-ಕಿರುತೆರೆಗಳಲ್ಲಿ ಹೀರೊ ಆಗಿ ಮಿಂಚುತ್ತಿರುವ ಕಿಚ್ಚ ಸುದೀಪ್  ಬೆಳಕಿನ ಹಬ್ಬದಂದು ಧನ ಸಹಾಯ ಮಾಡುವ ಮೂಲಕ ನಿಜ ಜೀವನದಲ್ಲೂ ಹೀರೊ ಎನಿಸಿಕೊಂಡಿದ್ದಾರೆ.

*ಕಪ್ಪು ಮೂಗುತ್ತಿ

Trending videos

Back to Top