CONNECT WITH US  

ಅಂತೂ ಇಂತೂ ಫಿಕ್ಸ್ ಆಯಿತು ಸುದೀಪ್-ಶಿವಣ್ಣ ಚಿತ್ರದ ಮುಹೂರ್ತ

ಸ್ಯಾಂಡಲ್ ವುಡ್'ನ ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಒಂದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಅಭಿಮಾನಿಗಳ ಆಸೆಯು ಈಡೇರುವ ಬೆಳವಣಿಗೆಯು ಕನ್ನಡ ಚಿತ್ರರಂಗದಲ್ಲಿ ನಡೆದಿದೆ. 

ಹೌದು...
ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೊ ಶಿವಣ್ಣ ಒಂದೇ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಮಲ್ಟಿಸ್ಟಾರ್'ಗಳನ್ನು ಒಂದೇ ಚಿತ್ರದಲ್ಲಿ ಸೇರಿಸುತ್ತಿರುವುದು ಮತ್ಯಾರು ಅಲ್ಲ, ಜೋಗಿ ಖ್ಯಾತಿಯ ಪ್ರೇಮ್ ಎಂಬುದು ವಿಶೇಷ.

ಖ್ಯಾತ ನಿರ್ಮಾಪಕ ಸಿ.ಆರ್ ಮೋಹನ್ ನಿರ್ಮಿಸಲಿರುವ ಈ ಬಹುಭಾಷಾ ಚಿತ್ರದ ಮುಹೂರ್ತವು ಡಿಸೆಂಬರ್ 7ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ತಿಳಿದು ಬಂದಿದೆ. 

ಶಿವಣ್ಣ-ಸುದೀಪ್'ರ ಕಾಂಬಿನೇಷನ್'ನಲ್ಲಿ ಮೂಡಿಬರಲಿರುವ ಈ ಹೊಸ ಚಿತ್ರಕ್ಕೆ 'ಕುಂಭಮೇಳ' ಎಂದು ಶೀರ್ಷಿಕೆ ಇಡಲಾಗುತ್ತದೆ ಎಂಬ ಸುದ್ದಿಯೊಂದು ಗಾಂಧಿನಗರದಿಂದ ಕೇಳಿಬರುತ್ತಿದೆ.

ಸದ್ಯ ಸುದೀಪ್ ಕೆ.ಎಸ್ ರವಿಕುಮಾರ್ ನಿರ್ದೇಶನದ ಬಹುಭಾಷಾ ಚಿತ್ರದಲ್ಲಿ ಬಿಝಿಯಾಗಿದ್ದು ಹಾಗೆಯೇ ಶಿವಣ್ಣ ಸಂತ ಕಬೀರ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸ್ಯಾಂಡಲ್ ವುಡ್'ನ ಮಲ್ಟಿಸ್ಟಾರ್ಸ್ ಸಿನೆಮಾದ ಶೂಟಿಂಗ್ ಜನವರಿಯಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಅದೇನೇ ಇರಲಿ, ತಮ್ಮದೇಯಾದ ಅಭಿಮಾನಿ ಪಡೆಯನ್ನು ಹೊಂದಿರುವುದರಿಂದ ಈ ಇಬ್ಬರು ಸ್ಟಾರ್ಸ್ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ಪೈಸಾ ವಸೂಲ್  ಮನರಂಜನೆ ಸಿಗುವುದಂತು ಗ್ಯಾರಂಟಿ.

*ಕಪ್ಪು ಮೂಗುತ್ತಿ

Trending videos

Back to Top