CONNECT WITH US  

ಜೈ ಕೇಸರಿ ನಂದನಗೆ ಒಂದು ಹಾಡು ಬಾಕಿ

ಈ ಹಿಂದೆ "ಕೆಂಗುಲಾಬಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀಧರ್‌ ಜಾವೂರ್‌ ಈಗ ಮತ್ತೂಂದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. "ಜೈ ಕೇಸರಿ ನಂದನ' ಎಂಬ  ಹೆಸರಿನ ಈ ಚಿತ್ರದ ಚಿತ್ರೀಕರಣ ಶೇ. 95 ಭಾಗದಷ್ಟು ಮುಕ್ತಾಯಗೊಂಡಿದೆ. ನಿರ್ದೇಶಕರೇ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ, ಬಾದಾಮಿ, ಗಜೇಂದ್ರ ಘಡ, ಕೂಕನೂರು ಹಾಗೂ ಕೊಪ್ಪಳ ಸುತ್ತಮುತ್ತ ಮಾತಿನ  ಭಾಗದ ಹಾಗೂ ಹಾಡುಗಳ ಚಿತ್ರೀಕರಣ ನಡೆಸಲಾಗಿದೆ. 

"ಊರ್‌ ಸುಟ್ಟೂರು ಹನುಮಂತಪ್ಪನ ವರಗ' ಎಂಬ ಹೆಸರಿನ ಜನಪ್ರಿಯ ನಾಟಕನ್ನಾಧರಿಸಿ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ದೇವರು ಹಾಗೂ ಮನುಷ್ಯನ ಮಧ್ಯೆ ಜನಜಾಗೃತಿ ಮೂಡಿಸುವ ಕಥೆ ಇದಾಗಿದ್ದು, ಗಂಭೀರ ವಿಷಯವನ್ನು ನಿರ್ದೇಶಕರು ಕಾಮಿಡಿ ಲೇಪನದೊಂದಿಗೆ ಕಥೆಯನ್ನು ಹೇಳಿಕೊಂಡು ಹೋಗಿದ್ದಾರೆ. ಶಶಿಧರ್‌ ದಾನಿ, ನಾರಾಯಣ್‌ ಸಾ ಪವಾರ್‌, ಲಕ್ಷ್ಮಣ್‌ ಪವಾರ್‌ ಹಾಗೂ  ಪ್ರವೀಣ್‌ ಪತ್ರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗೇಶ್‌ ಆಚಾರ್ಯ ಛಾಯಾಗ್ರಹಣ, ರಾಜ್‌ ಕಿಶೋರ್‌ ರಾವ್‌ ಸಂಗೀತ,

ಥ್ರಿಲ್ಲರ್‌ ಮಂಜು ಸಾಹಸ, ಈಶ್ವರ್‌ ಸಂಕಲನ, ಹನುಮಂತಪ್ಪ ಹಾಲಿಗೆರಿ ಕಥೆ, ಸಂಜೀವ್‌ ಮಲಾದೊರೆ ಸಾಹಿತ್ಯ, ವೀರೇಶ್‌  ಪುರವಂತರ ಕಲಾನಿರ್ದೇಶನವಿದೆ. ಕಲ್ಲೇಶ್‌ ಕೊಪ್ಪಳ, ಭರತ್‌ ತಾಳಿಕೋಟೆ, ಅಮೃತ, ಅಶ್ವಿ‌ನಿ, ಅಂಜುಶ್ರೀ, ಅಮೃತ ಕಾಳೆ, ರಾಜು ತಾಳಿ ಕೋಟೆ, ಗುರುರಾಜ್‌ ಹೊಸಕೋಟೆ, ಅನಿಲ್‌ ಜಾವೂರ್‌, ಪ್ರವೀಣ್‌ ಪತ್ರಿ, ಯುವರಾಜ್‌, ಶಶಿಧರ್‌ ದಾನಿ, ಆನಂದ್‌, ಶಿವಕುಮಾರ ಸ್ವಾಮೀಜಿ, ಇನ್ನೂ ಮುಂತಾದವರ ತಾರಾಬಳಗವಿದೆ. 

Trending videos

Back to Top