CONNECT WITH US  

ಕನ್ನಡದ 'ತಿಥಿ' ಸಿನಿಮಾಕ್ಕೆ ಸ್ವಿಜರ್ಲೆಂಡ್‌ ಚಿತ್ರೋತ್ಸವ ಪ್ರಶಸ್ತಿ

ಮುಂಬೈ: ಬೆಂಗಳೂರಿನ ಚಿತ್ರ ನಿರ್ದೇಶಕ ರಾಮ್‌ ರೆಡ್ಡಿ ಅವರ ಚೊಚ್ಚಲ ಕನ್ನಡ ಸಿನಿಮಾ "ತಿಥಿ'ಗೆ ಸ್ವಿಜರ್ಲೆಂಡ್‌ನ‌ಲ್ಲಿ ನಡೆದ ಲೊಕಾರ್ನೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 2 ಪ್ರಶಸ್ತಿ ಲಭಿಸಿವೆ. 8ವರ್ಷಗಳ ಬಳಿಕ ಈ ಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಭಾರತೀಯ ಚಿತ್ರ ಇದಾಗಿದೆ. 

ಎಂಟು ವರ್ಷಗಳ ಬಳಿಕ ಈ ಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಭಾರತೀಯ ಚಿತ್ರ ಎಂಬ ಹಿರಿಮೆಗೆ ಪಾತ್ರವಾಗಿದ್ದ "ತಿಥಿ' ಸಿನಿಮಾಕ್ಕೆ ಪಾಡೋì ಡೊರೊ ಸಿನಿಯಾಸ್ತಿ ಡೆಲ್‌ ಪ್ರಸೆಂಟೆ ಪ್ರಿಮಿಯೋ ನೆಸೆನ್ಸ್‌ ಹಾಗೂ ಸ್ವಾಚ್‌ ಫ‌ಸ್ಟ್‌ μàಚರ್‌ ಪ್ರಶಸ್ತಿಗಳು ದೊರೆತಿವೆ. ಈ ಸಿನಿಮಾದಲ್ಲಿ ಯಾವುದೇ ವೃತ್ತಿಪರ ಕಲಾವಿದರು ನಟಿಸಿಲ್ಲ ಎಂಬುದು ಗಮನಾರ್ಹ.

ಭಾರತದ ಜೀವಾಳದ ಸಣ್ಣ ತುಣುಕನ್ನು ಚಲನಚಿತ್ರದಲ್ಲಿ ಸೆರೆಹಿಡಿಯಬೇಕೆಂಬ  ಕನಸನ್ನು ನಾನು ಯಾವಾಗಲೂ ಕಾಣುತ್ತಿದ್ದೆ. "ತಿಥಿ'ಯ ಮೂಲಕ ಆ ಪ್ರಯತ್ನ ಮಾಡಿದ್ದೇನೆ ಎಂದು ರಾಮ್‌ ರೆಡ್ಡಿ ತಿಳಿಸಿದ್ದಾರೆ. ಭಾರತದ ಸ್ವಾತಂತ್ರ್ಯ ದಿನಾಚರಣೆಯಂದೇ ಈ ಪ್ರಶಸ್ತಿ ಲಭಿಸಿದೆ. ಅಲ್ಲದೆ ಚಲನಚಿತ್ರ ಪ್ರದರ್ಶನದ ವೇಳೆ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. ಇವು ನನಗೆ ಮತ್ತಷ್ಟು
ವಿಶೇಷವೆನಿಸಿವೆ ಎಂದಿದ್ದಾರೆ. ಈ ಹಿಂದೆ "ಲಗಾನ್‌', "ಮಿಸ್ಟರ್‌ ಅಂಡ್‌ ಮಿಸಸ್‌ ಅಯ್ಯರ್‌' ಹಾಗೂ "ಬ್ಲ್ಯಾಕ್‌ ಫ್ರೈಡೇ' ಸಿನಿಮಾಗಳು ಈ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದವು.

ಚಿತ್ರದ ಕತೆ ಏನು?
ಸೆಂಚುರಿಗೌಡ ಎಂಬ 101 ವರ್ಷದ ವೃದ್ಧ ಸ್ಥಳೀಯವಾಗಿ ಹೆಸರುವಾಸಿಯಾಗಿರುತ್ತಾನೆ. ಆತ ನಿಧನ ಹೊಂದಿದಾಗ ಸೆಂಚುರಿಗೌಡನ ಮೂರು ಪೀಳಿಗೆಯ ಮಕ್ಕಳು ಯಾವ ರೀತಿ ವರ್ತಿಸುತ್ತಾರೆ, ತಿಥಿಯ ಸಂದರ್ಭದಲ್ಲಿ ಹೇಗೆ ಒಟ್ಟುಗೂಡುತ್ತಾರೆ ಎಂಬುದನ್ನು ಈ ಸಿನಿಮಾದಲ್ಲಿ ಹಾಸ್ಯಮಯವಾಗಿ  ತೋರಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.

ಚಿತ್ರೀಕರಣ ನಡೆದ ಊರಿನಲ್ಲೇ ಬಾಲ್ಯ ಕಳೆದ ಈರೇಗೌಡ ಎಂಬುವರು ಜತೆಗೂಡಿ ರಾಮ್‌ ರೆಡ್ಡಿ ಚಿತ್ರಕತೆ ಅಭಿವೃದ್ಧಿಪಡಿಸಿದ್ದಾರೆ. ವೃತ್ತಿಪರರಲ್ಲದ ನಟರು ಇದರಲ್ಲಿ ನಟಿಸಿದ್ದಾರೆ. 

Trending videos

Back to Top