CONNECT WITH US  

ಎತ್ತಿನಹೊಳೆಗೆ ಬ್ಯಾರೇಜ್‌ ನಿರ್ಮಾಣ ಆರಂಭ

ತುಮಕೂರು: ಬರಪೀಡಿತ ಜಿಲ್ಲೆಗಳಾದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಹಾಸನ ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಕಾರ್ಯಾಗತವಾಗುತ್ತಿದ್ದು, ಮೊದಲ ಹಂತದಲ್ಲಿ ಹಳ್ಳಗಳಿಗೆ ಅಡ್ಡಲಾಗಿ ಬ್ಯಾರೇಜ್‌ ನಿರ್ಮಾಣ ಕಾರ್ಯ ಆರಂಭವಾಗಿದೆ.

12,912 ಕೋಟಿ ರೂ. ಬೃಹತ್‌ ಮೊತ್ತದ ರೂಪುರೇಷೆಗೆ ಚಾಲನೆ ದೊರೆತು ಕಾಮಗಾರಿ ನಡೆಯುತ್ತಿರುವಾಗಲೇ ಯೋಜನೆ ಕುರಿತು ಪರ ವಿರೋಧದ ಪ್ರತಿಭಟನೆಗಳು ಅಲ್ಲಲ್ಲಿ ನಡೆಯುತ್ತಿದೆ. ಇದರ ಮಧ್ಯೆಯೇ ಬ್ಯಾರೇಜ್‌ ನಿರ್ಮಿಸುತ್ತಿರುವುದು ಬಯಲುಸೀಮೆಯ ಭಾಗದ ಜನರಲ್ಲಿ ಆಶಾ ಭಾವನೆ ಮೂಡಿಸಿದೆ.

ಯೋಜನೆ ಅನುಷ್ಠಾನ ಹೇಗೆ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗೆ ಪಶ್ಚಿಮಘಟ್ಟದ ಮೇಲಾºಗದ ಹಳ್ಳಗಳ ಪ್ರವಾಹದ ನೀರು ಮಳೆಗಾಲದಲ್ಲಿ ಸಮುದ್ರಕ್ಕೆ ಸೇರುತ್ತಿದೆ. ಎತ್ತಿನಹೊಳೆಯ ಹಳ್ಳಗಳ 8 ಕಡೆ ತಡೆ ಅಣೆಕಟ್ಟೆ, ಪಂಪ್‌ ಹೌಸ್‌ಗಳ ನಿರ್ಮಿಸಿ ಅಲ್ಲಿ ಶೇಖರಣೆಯಾಗುವ ನೀರನ್ನು ಪೈಪ್‌ ಲೇನ್‌ ಮೂಲಕ ಮೇಲೆತ್ತಿ 8 ಕಡೆಯಿಂದಲೂ 3.2 ಸುತ್ತಳತೆ ಪೈಪ್‌ಗ್ಳನ್ನು ಅಳವಡಿಸಿ ಸಕಲೇಶ್‌ಪುರ ಬಳಿಯ ಹರವನಹಳ್ಳಿ ಹತ್ತಿರದ ವಿತರಣಾ ತೊಟ್ಟಿಗೆ ಲಿಂಕ್‌ ಮಾಡಲಾಗುತ್ತದೆ.

2ನೇ ಹಂತದಲ್ಲಿ ಹರವನಹಳ್ಳಿ ತೊಟ್ಟಿಯಿಂದ 274 ಕಿ.ಮೀ. ಉದ್ದದ ಗುರುತ್ವಾಕರ್ಷಣೆಯ ಕಾಲುವೆ (12.50 ಕಿ.ಮೀ. ಉದ್ದದ ಮೇಲ್ಗಾವೆ) ನಿರ್ಮಾಣ, ಕೊರಟಗೆರೆ ತಾಲೂಕು ಬೈರಗೊಂಡ್ಲು ಬಳಿ 5.78 ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಾಣ, ನಂತರ ಜಲಾಶಯದಿಂದ ದೊಡ್ಡಬಳ್ಳಾಪುರವರೆಗೆ 45 ಕಿ.ಮೀ. ರೈಸಿಂಗ್‌ಮೈನ್‌ ನಿರ್ಮಾಣ, ದೊಡ್ಡಬಳ್ಳಾಪುರ ಬಳಿ ತೊಟ್ಟಿ ನಿರ್ಮಾಣ, ತೊಟ್ಟಿಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಡೆಗೆ ಗುರುತ್ವಾಕರ್ಷಣೆ ಕಾಲುವೆಗಳ ನಿರ್ಮಾಣದ ಉದ್ದೇಶವಿದೆ.

ನೀರಾವರಿ ತಜ್ಞ ದಿವಂಗತ ಜಿ.ಎಸ್‌.ಪರಮಶಿವಯ್ಯ ಅವರ ವರದಿಯನ್ನು ಹಲವು ಮಾರ್ಪಾಡು ಮಾಡಿ, ವಿದ್ಯುತ್‌ ಬಳಸಿ ನೀರನ್ನು ಲಿಫ್ಟ್ ಮಾಡುವ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಪಶ್ಚಿಮಘಟ್ಟಗಳಲ್ಲಿ 3440 ಟಿಎಂಸಿ ನೀರು ಸಮುದ್ರಕ್ಕೆ ಹರಿಯುತ್ತಿದೆ.

1500 ಕೋಟಿಯ ಕಾಮಗಾರಿ ಪೂರ್ಣ:
ಈಗಾಗಲೇ ಮೊದಲ ಹಂತದಲ್ಲಿ ಬಿಡುಗಡೆಯಾಗಿರುವ 3500 ಕೋಟಿಯಲ್ಲಿ 1500 ಕೋಟಿ ರೂ.ಗಳಷ್ಟು ಕಾಮಗಾರಿಗಳು ನಡೆದಿದೆ ಎನ್ನಲಾಗಿದೆ. ಸಕಲೇಶ್‌ಪುರ ಬಳಿಯ ಪಶ್ಚಿಮಘಟ್ಟ ಮೇಲ್ಭಾಗದಲ್ಲಿ ಹರಿಯುವ ಎತ್ತಿನ ಹೊಳೆ ನೀರಿಗೆ 1ನೇ ಅಣೆಕಟ್ಟೆ ತುಂಬಾಡಿ ಕಾಫಿ ಎಸ್ಟೇಟ್‌ ಬಳಿ, 2 ಮತ್ತು 3ನೇ ಅಣೆಕಟ್ಟೆ ಹೆಗ್ಗಾರೆ ಬಳಿ, 4 ಮತ್ತು 5ನೇ ಅಣೆಕಟ್ಟೆ ಕಾಡುಮನೆ ಎಸ್ಟೇಟ್‌ ಬಳಿ 6 ಮತ್ತು 7ನೆ ಅಣೆಕಟ್ಟೆ ಕಾಡಗಾರಹಳ್ಳಿ ಬಳಿ ಹಾಗೂ 8ನೆ ಅಣೆಕಟ್ಟೆ ಹರವನಹಳ್ಳಿ ಬಳಿ ಸೇರಿದಂತೆ ಒಟ್ಟು 8 ಅಣೆಕಟ್ಟೆಗಳನ್ನು ನಿರ್ಮಿಸಲಾಗುತ್ತಿದೆ.
 

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top