CONNECT WITH US  

ಶಾಲೆಗಳ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ನೆರವು ಅವಶ್ಯ

ನೆಲಮಂಗಲ: ಶಾಲೆಗಳು ಸರ್ವತೋಮುಖ ಅಭಿವೃದ್ಧಿ ಕಾಣಲು ಹಳೆ ವಿದ್ಯಾರ್ಥಿಗಳ  ಸಹಕಾರ ಅತ್ಯವಶ್ಯಕ ಎಂದು ಮುಖ್ಯ ಶಿಕ್ಷಕ ರಾಮಕೃಷ್ಣಯ್ಯ ತಿಳಿಸಿದರು ತಾಲೂಕಿನ ಸಮೀಪ ಬಾಗಲಗುಂಟೆಯ ಶೀಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ನಡೆದ  ವಾದ್ಯ ಪರಿಕರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಶಾಲೆಯ ಅಭಿವೃದ್ಧಿ ಮಾಡಲು ಸರ್ಕಾರ ಮತ್ತು ಆಡಳಿತ ಮಂಡಳಿಗೆ ಹಣಕಾಸಿನ ಕೊರತೆ ಇರುತ್ತದೆ. ಹೀಗಾಗಿ ಉನ್ನತ ಹುದ್ದೆ ಅಲಂಕರಿಸಿದ ಹಳೆಯ ವಿದ್ಯಾರ್ಥಿಗಳು ಶಾಲೆ ಅಭಿವೃದ್ಧಿ ಗೆ ಶ್ರಮಿಸಿದರೆ ಮುಂದಿನ ಪೀಳಿಗೆ ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತದೆ ಎಂದರು.

ಇದೇ ವೇಳೆ ಗಂಗಾಧರೇಶ್ವರ ಪ್ರೌಢಶಾಲೆಗೆ  ಪಥ ಸಂಚಲನ ಮಾಡಲು ಬೇಕಾದ ವಾದ್ಯಪರಿಕರಗಳನ್ನು ಹಳೆ ವಿದ್ಯಾರ್ಥಿಗಳು ನೀಡಿದರು. ಸಂದರ್ಭದಲ್ಲಿ ಶಿಕ್ಷಕರಾದ ಎಸ್‌.ನರಸಿಂಹಮೂರ್ತಿ, ಎನ್‌.ಸಂತೋಷ, ಎಚ್‌.ಶ್ರೀನಿವಾಸಮೂರ್ತಿ, ಯಶೋಧ, ಶ್ರೀರಂಗಯ್ಯ, ಡಿ.ದರ್ಜೆ ಹೇಮಾವತಿ ಮತ್ತಿತರರಿದ್ದರು.


Trending videos

Back to Top