CONNECT WITH US  

ಕಂದಾಯ ಅದಾಲತ್‌ನಿಂದ ರೈತರಿಗೆ ಅನುಕೂಲ

ದೇವನಹಳ್ಳಿ: ಕಂದಾಯ ಅದಾಲತ್‌ನಿಂದ ಪಹಣಿ ತಿದ್ದುಪಡಿ, ಆದೇಶ ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕರಿಗೌಡ ಹೇಳಿದರು. ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಯಲಿಯೂರು ಗ್ರಾಪಂ ಆವರಣದಲ್ಲಿ ನಡೆದ ಕಂದಾಯ ಅದಾಲತ್‌ನಲ್ಲಿ ಮಾತನಾಡಿದರು.

 ಎಲ್ಲಾ ಹೋಬಳಿಗಳಲ್ಲೂ ಕಂದಾಯ ಅದಾಲತ್‌ ಪ್ರಾರಂಭವಾಗಿವೆ. ಇದರಿಂದ ರೈತರು ಪಹಣಿಯಲ್ಲಿ ಇರುವ 3 ಮತ್ತು 9 ನೇ ಕಲಂನಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು. ತಹಶೀಲ್ದಾರ್‌ ರಾಜಣ್ಣ, ನಿಯೋಜಿತ ಕಂದಾಯ ಅದಾಲತ್‌ ಅಧಿಕಾರಿ ಮಮತಾದೇವಿ, ಪ್ರಭಾರ ಉಪತಹಶೀಲ್ದಾರ್‌ ಹಾಗೂ ರಾಜಸ್ವ ನಿರೀಕ್ಷಕ ಚಿದಾನಂದ್‌, ಗ್ರಾಮಲೆಕ್ಕಾಧಿಕಾರಿ ವೇಣುಗೋಪಾಲ್‌, ಅಕ್ಷಯ್‌, ಗೌತಮ್‌ ಇದ್ದರು.


Trending videos

Back to Top