CONNECT WITH US  

ಕಾರ್ನಾಡ್‌ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಯಲಹಂಕ: ನಾಡಪ್ರಭು ಕೆಂಪೇಗೌಡರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಜಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ವಿರುದ್ಧ ಬಿಜೆಪಿ ಕಾರ್ಯಕರ್ತರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಟರಾಯನಪುರ, ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಒಕ್ಕಲಿಗರ ಸಂಘದ ಸದಸ್ಯರು ಯಲಹಂಕ ಸಂತೆ ವೃತ್ತದ ಕೆಂಪೇಗೌಡ ಪ್ರತಿಮೆಯ ಮುಂದೆ ಜಮಾವಣೆಗೊಂಡು ರಾಜ್ಯ ಸರ್ಕಾರ ಮತ್ತು ಗಿರೀಶ್‌ ಕಾರ್ನಾಡ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರ್ನಾಡರ ಅಣುಕು ಶವಯಾತ್ರೆ ನಡೆಸಿ, ಅವರ ವಿರುದ್ಧ ಘೋಷಣೆ ಕೂಗಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎ. ರವಿ ಮಾತನಾಡಿ, ಗಿರೀಶ್‌ ಕಾರ್ನಾಡ್‌ ಯಾರನ್ನೋ ಮೆಚ್ಚಿಸಲು ಇಂತಹ ವಿವಾದಾತ್ಮಕ ಹೇಳಿಕೆ ಸೃಷ್ಟಿಸಿದ್ದಾರೆ. ಕೆಂಪೇಗೌಡರು ಸ್ವಾತಂತ್ರÂ ಹೋರಾಟಗಾರರೇ ಅಲ್ಲ ಎಂದಿರುವುದು ನಾಡಿನ ದುರಂತ. ಇಂತಹ ಹೇಳಿಕೆಯನ್ನು ರಾಜ್ಯದ ಜನ ಸಹಿಸುವುದಿಲ್ಲ. ಸಮಸ್ತ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಎಸ್‌.ಆರ್‌. ವಿಶ್ವನಾಥ್‌ ಮಾತನಾಡಿ, ಕೆಂಪೇಗೌಡ ಅಪ್ರತಿಮ ಹೋರಾಟಗಾರ. ಕಾರ್ನಾಡ್‌ ಯಾರನ್ನೋ ಓಲೈಸಲು ಇಂತಹ ಹೇಳಿಕೆಯನ್ನು ನೀಡಿದ್ದಾರೆ. ಇವರ ಹೇಳಿಕೆಯನ್ನು ಮುಖ್ಯಮಂತ್ರಿಗಳು ಖಂಡಿಸ ಬಹುದಾಗಿತ್ತು. ಆದರೆ, ಅಲ್ಪಸಂಖ್ಯಾತರನ್ನು ಓಲೈಸಲು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಕನ್ನಡಿಗರ ಸಹನೆಯನ್ನು ಕೆಣಕಿದ್ದಾರೆ. ಸರ್ಕಾರ ಕೂಡಲೇ ತಪ್ಪನ್ನು ಸರಿಪಡಿಸಿಕೊಂಡು ಕಾರ್ನಾಡರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪ್ರೊ. ನಂಜುಂಡಪ್ಪ, ಬಿಬಿಎಂಪಿ ಸದಸ್ಯರಾದ ಸತ್ತೀಶ್‌, ಎಸ್‌. ರಾಜಣ್ಣ, ಕಡತನಮಲೆ ಸತೀಶ್‌, ಮಾಜಿ ಸದಸ್ಯರಾದ ಮುನಿರಾಜು, ಅಶ್ವಥ್‌ ನಾರಾಯಣಗೌಡ, ಮುಖಂಡರಾದ ಕಾಕೋಳು ಮಾರೇಗೌಡ, ಕೆಂಪೇಗೌಡ ಮತ್ತಿತರರು ಹಾಜರಿದ್ದರು.

Trending videos

Back to Top