CONNECT WITH US  

ಶ್ರವಣ ವೈಕಲ್ಯ ನಿವಾರಣೆಗೆ ಬ್ರೆಟ್‌ ಲೀ ಅಭಿಯಾನ

ಬೆಂಗಳೂರು: ಶ್ರವಣ ದೋಷ ಭಾರತದಲ್ಲಿ ಎರಡನೇ ಅತಿದೊಡ್ಡ ಅಂಗವೈಕಲ್ಯವಾಗಿದ್ದು, ಈ ಕುರಿತು ಅರಿವಿನ ಅಭಿಯಾನ ಅಗತ್ಯವಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ನ ಮಾಜಿ ಆಟಗಾರ ಬ್ರೆಟ್‌ ಲೀ ಹೇಳಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ಒಟ್ಟಾರೆ 466 ದಶಲಕ್ಷ ಮಂದಿ ಶ್ರವಣ ದೋಷದಿಂದ ಬಳಲುತ್ತಿದ್ದಾರೆ. ಇದರಲ್ಲಿ 34 ದಶಲಕ್ಷ ಮಕ್ಕಳೇ ಇದ್ದು, ನವಜಾತ ಶಿಶುಗಳ ಶ್ರವಣ ದೋಷ ತಪಾಸಣೆ (ಯುಎನ್‌ಎಚ್‌ಎಸ್‌) ಕಡ್ಡಾಯಗೊಳಿಸುವಂಥ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಶ್ರವಣ ಸಾಮರ್ಥ್ಯದ ಬಗ್ಗೆ ನವಜಾತ ಶಿಶುಗಳನ್ನು ಶ್ರವಣ ದೋಷ ತಪಾಸಣೆ ಒಳಪಡಿಸುವ ವ್ಯವಸ್ಥೆ ಇಲ್ಲ. ಆದರೆ. ವಿದೇಶಗಳಲ್ಲಿ ಸಾರ್ವತ್ರಿಕವಾಗಿ ನವಜಾತ ಶಿಶುಗಳ ಇದು ಕಡ್ಡಾಯ ವಾಗಿರುತ್ತದೆ.

ಶ್ರವಣ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ತೀರಾ ಶ್ರವಣ ನಷ್ಟಕ್ಕೆ ಒಳಗಾದ ಮಕ್ಕಳ ಪೋಷಕರು ಆರಂಭಿಕ ಹಂತದಲ್ಲೇ ಚಿಕಿತ್ಸೆ ಒದಗಿಸಿಕೊಡಬೇಕಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ನವಜಾತ ಶಿಶುಗಳ ಶ್ರವಣ ದೋಷ ತಪಾಸಣೆ (ಯುಎಸ್‌ಎಚ್‌ಎಸ್‌) ಕಡ್ಡಾಯಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top