CONNECT WITH US  

ಲಂಡನ್‌ ಉದ್ಯಮವನ್ನು ನಗರಕ್ಕೆ ಕರೆತಂದ ಕನ್ನಡತಿ

ಬೆಂಗಳೂರು: ರಾಜ್ಯ ಸರ್ಕಾರ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದರೂ ಉದ್ಯಮಿಗಳು ಹೂಡಿಕೆಗೆ ಕೆಲವೊಮ್ಮೆ ಹಿಂದೇಟು ಹಾಕುವುದು ಸಾಮಾನ್ಯ. ಇದರ ನಡುವೆಯೇ ಕನ್ನಡತಿಯೊಬ್ಬರು ಸದ್ದಿಲ್ಲದೆ ಉದ್ಯಮಿಗಳನ್ನು ನಗರಕ್ಕೆ ಕರೆತರುವ ಕೆಲಸದಲ್ಲಿ ತೊಡಗಿದ್ದಾರೆ.

ಇಂಡಿಯಾ ಬಿಸ್‌ನೆಸ್‌ ಹಬ್‌ ಸಂಸ್ಥೆಯ ಮುಖ್ಯಸ್ಥೆ ವಿಪ್ಲವಿ ಮಹೇಂದ್ರ ಅವರು ಬ್ರಿಟನ್‌ ಮೂಲದ ರೋಬರ್‌ ಪ್ರೈವೇಟ್‌ ಲಿ. ಸಂಸ್ಥೆ ನಗರದಲ್ಲಿ ಹೂಡಿಕೆ ಮಾಡಲು ಕಾರಣಿಭೂತರಾಗಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರೋಬರ್‌ ಸಂಸ್ಥೆ ನಗರದಲ್ಲಿ ಆರಂಭಗೊಳ್ಳುತ್ತಿದ್ದು, ಗುರುವಾರ ಅಧಿಕೃತವಾಗಿ ಉದ್ಘಾಟನೆಯಾಗಲಿದೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ವಿಪ್ಲವಿ ಮಹೇಂದ್ರ, ಬಂಡವಾಳ ಹೂಡಿಕೆಗೆ ಯೂರೋಪ್‌ ದೇಶಗಳು ತುದಿಗಾಲಲ್ಲಿ ನಿಂತಿವೆ. ಆದರೆ, ಉದ್ಯಮಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವ ವರಿಲ್ಲ. ತಪ್ಪು ಮಾಹಿತಿ ನೀಡಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ಯೂರೋಪ್‌ ರಾಷ್ಟ್ರಗಳು ದೇಶದಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿವೆ. ಇದನ್ನು ಮನಗಂಡು ಭಾರತದಲ್ಲಿ ಹೂಡಿಕೆ ಮಾಡುವ ಸಲಹೆ ನೀಡಲಾಗುತ್ತಿದೆ. ಅದರಲ್ಲೂ ಬೆಂಗಳೂರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಕಾನೂನು ಪದವಿ ವಿದ್ಯಾಭ್ಯಾಸದ ಬಳಿಕ ಬಿಟ್ರನ್‌ನಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ವೇಳೆ ಭಾರತಕ್ಕಾಗಿ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಬಿರ್ಮಿಂಗ್ ಹ್ಯಾಮ್‌ನಲ್ಲಿ ಇಂಡಿಯಾ ಬಿಸ್‌ನೆಸ್‌ ಹಬ್‌ ಸಂಸ್ಥೆ ಆರಂಭಿಸಲಾಯಿತು. ಯಾರ ಸಹಾಯವೂ ಇಲ್ಲದೆ ಆರಂಭಿಸಿದ ಸಂಸ್ಥೆ ಇದೀಗ ಬಿರ್ಮಿಂಗ್ ಹ್ಯಾಮ್‌ ಸೇರಿದಂತೆ ಬೆಂಗಳೂರು ಮತ್ತು ದೆಹಲಿಯಲ್ಲಿ ಶಾಖೆ ಆರಂಭಿಸಿದೆ ಎಂದು ಹೇಳಿದರು.

ಈ ಸಂಸ್ಥೆ ಮೂಲಕ ಬಂಡವಾಳ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಸರ್ಕಾರದಿಂದ ಯಾವುದೇ ಬೆಂಬಲ ಇಲ್ಲ. ತಾವು ಹುಟ್ಟಿ ಬೆಳೆದ ನಾಡಿಗಾಗಿ ಕೊಡುಗೆ ನೀಡಬೇಕು ಎಂದು ಯೂರೋಪ್‌ ರಾಷ್ಟ್ರಗಳ ಉದ್ಯಮಿಗಳನ್ನು ಹೂಡಿಕೆಗೆ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದೇನೆ. ಬ್ರಿಟನ್‌ ಮೂಲದ ರೋಬರ್‌ ಪ್ರೈವೇಟ್‌ ಲಿ. ನಗರದಲ್ಲಿ ಹೂಡಿಕೆ ಮಾಡುತ್ತಿದೆ. ಆಸ್ಪತ್ರೆಗಳಿಗೆ ಅಗತ್ಯ ಇರುವ ಐಸಿಯು ಹಾಸಿಗೆ, ವೀಲ್‌ಚೆØàರ್‌ಗಳಂತಹ ವಸ್ತುಗಳನ್ನು ಉತ್ಪಾದಿಸುವ ಸಂಸ್ಥೆ ಇದಾಗಿದೆ ಎಂದರು.

Trending videos

Back to Top