CONNECT WITH US  

ಕೊನೆಗೂ ಬೆಂಗಳೂರಲ್ಲೇ ವಿಷ್ಣು ಸ್ಮಾರಕಕ್ಕೆ ಜಾಗ

ಬೆಂಗಳೂರು: ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣದ ಸಂಬಂಧ ಎದುರಾಗಿದ್ದ ವಿಘ್ನ ದೂರವಾಗಿದ್ದು, ದಿವಂಗತ ಬಾಲಕೃಷ್ಣ ಅವರ ಪುತ್ರಿ ಗೀತಾ ಬಾಲಿ ಅವರು ಸ್ಮಾರಕಕ್ಕೆ ಭೂಮಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.
ಸೋಮವಾರ ವಿಷ್ಣುವರ್ಧನ್‌ ಅಭಿಮಾನಿಗಳ ಸಂಘದ ಮುಂದಾಳತ್ವದಲ್ಲಿ ನಡೆದ ಸಭೆಯಲ್ಲಿ ಗೀತಾ ಬಾಲಿ ಮತ್ತು ಬಾಲಕೃಷ್ಣ ಪುತ್ರನ ಮನವೊಲಿಕೆ ಮಾಡಲಾಗಿದೆ.

ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣಕ್ಕೆ ಎರಡು ಎಕರೆ ಬಿಟ್ಟುಕೊಡಲು ಇಬ್ಬರೂ ಸಹಮತ ವ್ಯಕ್ತಪಡಿಸಿದ್ದಾರೆ. ಬಾಲಕೃಷ್ಣ ಮಕ್ಕಳ ನಡುವಿನ ಭೂಮಿ ವ್ಯಾಜ್ಯ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಭೂಮಿ ನೀಡಲು ಯಾವುದೇ ಅಭ್ಯಂತರ ಇಲ್ಲ ಎಂದು ಲಿಖೀತ ರೂಪದಲ್ಲಿ ನೀಡಲು ಇವರು ಒಪ್ಪಿಕೊಂಡಿದ್ದಾರೆ.

ವಿಷ್ಣುವರ್ಧನ್‌ ಸಮಾಧಿ ಇರುವ ಅಭಿಮಾನ್‌ ಸ್ಟುಡಿಯೋದಲ್ಲಿ 20 ಎಕರೆ ಬಾಲಕೃಷ್ಣ ಅವರಿಗೆ ಸೇರಿದ್ದ ಜಮೀನು ಇದ್ದು, ಈ ಪೈಕಿ ಮಗ 10 ಎಕರೆ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ. ಇನ್ನುಳಿದ 10 ಎಕರೆ ತಮಗೆ ನೀಡಬೇಕು ಎಂದು ಗೀತಾ ಬಾಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಸ್ಮಾರಕಕ್ಕೆ ವಿಘ್ನ ಎದುರಾಗಿತ್ತು. ಇದೀಗ ಎರಡು ಎಕರೆ ನೀಡಲು ಮುಂದಾಗಿದ್ದು, ಇನ್ನುಳಿದ ಎಂಟು ಎಕರೆ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದೆ.

Trending videos

Back to Top