CONNECT WITH US  

ಒ ಪಾಸಿಟೀವ್‌ ಆಗಿದ್ದರೆ ಬಾಂಬೆಬ್ಲಡ್‌ ಗ್ರೂಪ್‌ ಪರೀಕ್ಷೆ ಮಾಡಿಸಿ

ಬೆಂಗಳೂರು: ನಿಮ್ಮದು "ಒ' ಗುಂಪಿನ ರಕ್ತವೇ?
ಹಾಗಾದರೆ ಎಚ್‌-ಆ್ಯಂಜಿಟನ್‌ ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮದು ಬಾಂಬೆ ಬ್ಲಿಡ್‌ ಗುಂಪು ಆಗಿರಲೂಬಹುದು.!
ಇದೇನು "ಬಾಂಬೆ ಬ್ಲಿಡ್‌' ಎಂದು ಆಶ್ಚರ್ಯ ಪಡಬೇಕಿಲ್ಲ. ಎ, ಬಿ, ಎಬಿ ಮತ್ತು ಓ ಪಾಸಿಟಿವ್‌ ಹಾಗೂ ನೆಗೆಟಿವ್‌ ರಕ್ತದ ಗುಂಪು ಇರುವಂತೆ ಬಾಂಬೆ ಬ್ಲಿಡ್‌ ಎಂಬ ರಕ್ತದ ಗುಂಪಿದೆ. ಆದರೆ, ಈ ಗುಂಪು ಬಹಳ ವಿರಳ.

ಶುಕ್ರವಾರ ವಿಶ್ವದಾದ್ಯಂತ ರಕ್ತ ದಾನಿಗಳ ದಿನ ಆಚರಿಸಲಾಗುತ್ತಿದೆ. ಹೀಗಾಗಿ "ರಕ್ತ ನಿಧಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ ಇತರರಿಗೆ ಜೀವದಾನ ಮಾಡಿರಿ' ಎಂದು ರಕ್ತ ನಿಧಿ ಸಂಸ್ಥೆಗಳು ಕರೆ ನೀಡಿವೆ. ಅಪರೂಪವಾಗಿ ಲಭ್ಯ ಇರುವ ಬಾಂಬೆ ಬ್ಲಿಡ್‌ ಗುಂಪಿನವರು ಹೆಚ್ಚಾಗಿ ನೋಂದಾಯಿಸಿಕೊಳ್ಳಬೇಕಾದ ಅಗತ್ಯ ಇದೆ.

ಪ್ರಸ್ತುತ ಲಭ್ಯ ಇರುವ ಅಂಕಿ ಅಂಶ ಪ್ರಕಾರ ಕರ್ನಾಟಕದಲ್ಲಿ 75 ಮಂದಿ ಬಾಂಬೆ ಬ್ಲಿಡ್‌ ಗುಂಪಿನವರು ಇದ್ದಾರೆ. ಬೆಂಗಳೂರಿನಲ್ಲಿ 25 ಮಂದಿ ಬಾಂಬೆ ಬ್ಲಿಡ್‌ ಗುಂಪಿನವರಿದ್ದರೆ. ದೇಶದಲ್ಲಿ ಹೆಚ್ಚಾಗಿ ಹೈದರಾಬಾದ್‌ ಮತ್ತು ಚೆನ್ನೈನಲ್ಲಿ ಈ ಗುಂಪಿನ ಮಂದಿ ಸಿಗುತ್ತಾರೆ. ರಕ್ತನಿಧಿಗಳಲ್ಲಿ ನೂತನ ತಂತ್ರಜಾnನದ ಸಮಸ್ಯೆಯಿಂದ ಪತ್ತೆ ಹಚ್ಚುವುದು ಸ್ವಲ್ಪ ಕಷ್ಟವಾದರೂ, ಇರುವ ತಂತ್ರಜಾನವನ್ನೇ ಬಳಸಿ ಬಾಂಬೆ ಬ್ಲಿಡ್‌ ಗುಂಪಿನವರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ.

ಮುಂಬೈನಲ್ಲಿ ಮೊದಲು ಪತ್ತೆ:
ಮೊದಲು ಈ ರಕ್ತದ ಮಾದರಿ ಪತ್ತೆಯಾಗಿದ್ದು ಮುಂಬೈಯಲ್ಲಿ. ಹಾಗಾಗಿ ಮುಂಬೈನ ಹಳೆಯ ಹೆಸರು ಬಾಂಬೆ ಬ್ಲಿಡ್‌ ಎಂದು ನಾಮಕರಣ ಮಾಡಲಾಗಿದೆ. 1952ರಲ್ಲಿ ಮುಂಬೈನಲ್ಲಿ ವೈ.ಆರ್‌. ಬೇಂಡೆ ಎಂಬುವವರು ಈ ರಕ್ತದ ಗುಂಪನ್ನು ಪತ್ತೆ ಮಾಡಿದರು. ಎ, ಬಿ, ಎಬಿ ಒ ರಕ್ತ ಗುಂಪಿನಲ್ಲಿ ಪಾಸಿಟಿವ್‌ ಮತ್ತು ನೆಗೆಟಿವ್‌ ಇದ್ದಂತೆ ಬಾಂಬೆ ಬ್ಲಿಡ್‌ನ‌ಲ್ಲೂ ಪಾಸಿಟಿವ್‌ ಮತ್ತು ನೆಗೆಟಿವ್‌ ಗುಂಪು ಇರುತ್ತದೆ.

ಹೇಗೆ ಪತ್ತೆ?:
ರಕ್ತದ ಕಣಗಳ ಆಧಾರದ ಮೇಲೆ ರಕ್ತದ ಗುಂಪನ್ನು ಗುರುತಿಸಲಾಗುತ್ತದೆ. ಎ ಗುಂಪಿನಲ್ಲಿ ಎ-ಆ್ಯಂಜಿಟನ್‌, ಬಿ ಗುಂಪಿನಲ್ಲಿ ಬಿ-ಆ್ಯಂಜಿಟನ್‌, ಎಬಿಯಲ್ಲಿ ಎಬಿ-ಆ್ಯಂಜಿಟನ್‌ ಮತ್ತು ಒ ಗುಂಪಿನಲ್ಲಿ ಎಚ್‌ ಆ್ಯಂಜಿಟನ್‌ ಇರುತ್ತದೆ. ಯಾವ ವ್ಯಕ್ತಿ ಒ ಗುಂಪಿನವರಾಗಿದ್ದು, ಅವರಲ್ಲಿ ಎಚ್‌-ಆ್ಯಂಜಿಟನ್‌ ಅಂಶ ಇರುವುದಿಲ್ಲವೋ ಅಂತಹವರು ಬಾಂಬೆ ಬ್ಲಿಡ್‌ ಗುಂಪಿನವರು ಎಂದು ಗುರುತಿಸಲಾಗುತ್ತದೆ.

ಯಾವುದೇ ವ್ಯಕ್ತಿಯು ರಕ್ತ ಪರೀಕ್ಷೆ ಮಾಡಿಸಿಕೊಂಡಾಗ "ಒ' ರಕ್ತ ಗುಂಪು ಎಂದು ಕಂಡು ಬಂದಲ್ಲಿ ರಕ್ತನಿಧಿಯಾಗಲಿ ಅಥವಾ ಅಸ್ಪತ್ರೆಗಳು ಎಚ್‌-ಆ್ಯಂಜಿಟನ್‌ ಅಂಶ ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು. ಆದರೆ, ನಿರ್ಲಕ್ಷ್ಯದಿಂದಾಗಿ ಪರೀಕ್ಷೆ ಮಾಡುವುದಿಲ್ಲ. ಹೀಗಾಗಿ ಬಾಂಬೆ ಬ್ಲಿಡ್‌ ಗುರುತಿಸುವುದು ಕಷ್ಟ ಎನ್ನುತ್ತಾರೆ "ಸಂಕಲ್ಪ ಇಂಡಿಯಾ ಫೌಂಡೇಶನ್‌'ನ ಸಂಯೋಜಕಿ ಪ್ರಭಾ.

ಬಾಂಬೆ ಬ್ಲಿಡ್‌ ಗುಂಪಿನವರಿಗೆ ಅದೇ ಗುಂಪಿನ ರಕ್ತವನ್ನು ನೀಡಬೇಕು. ಅಕಸ್ಮಾತ್‌ "ಒ' ಗುಂಪಿನವರು ರಕ್ತ ನೀಡಿದರೆ ಬಾಂಬೆ ಬ್ಲಿಡ್‌ ಗುಂಪಿನ ವ್ಯಕ್ತಿಗಳು ಅನಾರೋಗ್ಯಕ್ಕೊಳಗಾಗಲಿದ್ದರೆ. ಕೆಲವೊಮ್ಮೆ ವ್ಯಕ್ತಿಗಳು ಸಾಯುವ ಸಾಧ್ಯತೆಯೂ ಇದೆ. ಹೀಗಾಗಿ "ಒ' ಗುಂಪಿನವರು ಎಚ್‌-ಆ್ಯಂಜಿಟನ್‌ ಅಂಶ ಇರುವ ಬಗ್ಗೆ ಪರೀಕ್ಷಿಸಿಕೊಳ್ಳುವುದು ಉತ್ತಮ ಎಂದು ಹೇಳುತ್ತಾರೆ.

ಅತಿ ವಿರಳವಾಗಿರುವ ಬಾಂಬೆ ಬ್ಲಿಡ್‌ ಗುಂಪಿನ ರಕ್ತ ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವ ಕೆಲಸ ಸಂಕಲ್ಪ ಇಂಡಿಯಾ ಫೌಂಡೇಶನ್‌ ಮಾಡುತ್ತಿದೆ. ಬಾಂಬೆ ಬ್ಲಿಡ್‌ ಗುಂಪಿನವರನ್ನು ಗುರುತಿಸಿ ರಕ್ತವನ್ನು ಸಂಗ್ರಹಿಸಿ, ಅಗತ್ಯ ಇರುವವರಿಗೆ ನೀಡಲಾಗುತ್ತಿದೆ. ಜನರಿಗೆ ಅರಿವಿನ ಕೊರೆ ಇರುವ ಕಾರಣ ಬಾಂಬೆ ಬ್ಲಿಡ್‌ ಪತ್ತೆ ಹಚ್ಚುವ ಕೆಲಸ ಕಷ್ಟವಾಗುತ್ತಿದ್ದು, ಜನರಲ್ಲಿ ಸರ್ಕಾರ, ಸಂಘ ಸಂಸ್ಥೆಗಳು, ಎನ್‌ಜಿಓಗಳು ಅರಿವು ಮೂಡಿಸಬೇಕಾದ ಅಗತ್ಯ ಇದೆ,

ಬೇರೆ ಗುಂಪಿನವರಿಗೆ ರಕ್ತದಾನ ಮಾಡಬೇಡಿ!
ಬಾಂಬೆ ಗ್ರೂಪ್‌ ರಕ್ತದ ಮಾದರಿ ಇತರ ಯಾವುದೇ ರಕ್ತದ ಗುಂಪಿನೊಂದಿಗೆ ಬೇಕಾದರೂ ಹೊಂದಿಕೆಯಾಗುತ್ತದೆ. ಹೀಗಾಗಿ ಬಾಂಬೆ ರಕ್ತ ಗುಂಪಿನವರ ರಕ್ತವನ್ನು ಯಾವುದೇ ಇತರೆ ಗುಂಪಿನವರು ಪಡೆಯಬಹುದು. ಆದರೆ, ಬಾಂಬೆ ರಕ್ತ ಗುಂಪಿನವರು ಅತ್ಯಂತ ಕಡಿಮೆಯಿರುವುದರಿಂದ ಅಗತ್ಯ ಬಿದ್ದಾಗ ಕೊರತೆ ಉಂಟಾಗಬಹುದು ಎಂಬ ಕಾರಣಕ್ಕೆ ಇತರೆ ಗುಂಪಿನವರಿಗೆ ರಕ್ತ ನೀಡಬೇಡಿ ಎಂದು ವೈದ್ಯರೇ ಬಾಂಬೆ ರಕ್ತ ಗುಂಪಿನವವರಿಗೆ ಸಲಹೆ ನೀಡುತ್ತಾರೆ.


Trending videos

Back to Top