CONNECT WITH US  

ಎಚ್‌ಐವಿ ಸೋಂಕಿತರಿಗೆ ಧೈರ್ಯ ತುಂಬಿ

ಬೆಳಗಾವಿ: ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್ಷನ್‌ ಸೊಸೈಟಿ, ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕ ಮತ್ತು ಸ್ಪೀಡ್‌ ಕೆಸಾಪ್ಸ್ ಟ್ರಕರ್ ಟಿಐ ವತಿಯಿಂದ ಎಸ್‌.ಸಿ. ಮೋಟಾರ್ ವತಿಯಿಂದ ವಿಶ್ವ ಏಡ್ಸ್‌ ದಿನಾಚರಣೆ ನಡೆಯಿತು. ಮಾಜಿ ಮೇಯರ್‌ ವಿಜಯ ಮೋರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಚ್‌ಐವಿ ಸೋಂಕಿತರಿಗೆ ಮಾನಸಿಕ ಧೈರ್ಯ ತುಂಬಿ ಅವರು ಮುಖ್ಯವಾಹಿನಿಗೆ ಬರುವ ಹಾಗೆ ನೋಡಿಕೊಳ್ಳಬೇಕು. ಎಚ್‌ಐವಿ ಸೋಂಕಿತರಿಗೆ ಕಳಂಕ ಸಲ್ಲದು. ಹಾಗೆಯೇ ತಾರತಮ್ಯ ತೋರದಿರಿ ಎಂದು ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌.ಸಿ. ಮೋಟಾರ್ ವ್ಯವಸ್ಥಾಪಕ ಶಶಿಕಾಂತ ಕಳ್ಳಿಮಠ ಮಾತನಾಡಿ, ಎಚ್‌ಐವಿ ಸೋಂಕಿತರು ಸರ್ಕಾರದ ಸೇವೆಗಳನ್ನು ಪಡೆದು ಜೀವನ ಸುಧಾರಿಸಿಕೊಳ್ಳಬೇಕೆಂದರು. ಸ್ಪೀಡ್‌ ಕೆಸಾಪ್ಸ್ನ ಪಿ.ವೈ. ನಾಯಿಕ ಎಚ್‌ಐವಿ/ಏಡ್ಸ್‌ ಹಿನ್ನೋಟ ಮತ್ತು ಮುಂದಿರುವ ಗುರಿಗಳ ಬಗ್ಗೆ ತಿಳಿಸಿ 2015 ರವರೆಗೆ ಎಚ್‌ಐವಿ ಸೋಂಕು, ಎಚ್‌ಐವಿ ಕಳಂಕ ತಾರತಮ್ಯ ಮತ್ತು ಎಚ್‌ಐವಿ/ಏಡ್ಸ್‌ನಿಂದ ಮರಣ ಪ್ರಮಾಣವನ್ನು ಸೊನ್ನೆಗೆ ಇಳಿಸಲು ಎಲ್ಲರೂ ಸಹಕಾರ ನೀಡಬೇಕೆಂದರು.

ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ|ಬಿ.ಎನ್‌. ತುಕ್ಕಾರ ಎಚ್‌ಐವಿ/ಏಡ್ಸ್‌ ಹರಡುವಿಕೆ, ತಡೆಗಟ್ಟುವ ವಿಧಾನ ಮತ್ತು ಸರ್ಕಾರದಿಂದ ಲಭ್ಯವಿರುವ ಸೇವೆಗಳ ಬಗ್ಗೆ ತಿಳಿಸಿದರು. ಅನಿಲ ಬೆನಕೆ ಮಾತನಾಡಿ, ಟ್ರಕ್‌ ಚಾಲಕರು ಮತ್ತು ಸಹಾಯಕರು ಆರೋಗ್ಯವೇ ಭಾಗ್ಯ ಎಂದು ತಿಳಿದು ತಮ್ಮ ಮತ್ತು ಕುಟುಂಬದ ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕೆಂದು ತಿಳಿಸಿದರು.

ವಾಸನ್‌ ಐ ಕೇರ್‌ನ ದಿನೇಶರಾವ್‌ ಮತ್ತು ಆನಂದ ತುಪ್ಪದ ಅವರು ಚಾಲಕ ಮತ್ತು ಸಹಾಯಕರ ನೇತ್ರ ತಪಾಸಣೆ ನಡೆಸಿದರು. ಯೋಜನೆಯ ವೈದ್ಯಾಧಿಕಾರಿ ಡಾ| ವಿಜಯ ನಾಯಕ ಎಚ್‌ಐವಿ/ಏಡ್ಸ್‌ ಹಾಗೂ ಗುಪ್ತ ರೋಗ ಸೋಂಕು ಮಾಹಿತಿ ನೀಡಿದರು. ನಂತರ ಚಾಲಕರು ಮತ್ತು ಸಹಾಯಕರಿಗೆ ಗುಪ್ತರೋಗದ ತಪಾಸಣೆ ಮಾಡಿದರು. ಅವಿನಾಶ ಹಳಾಳ ಸ್ವಾಗತಿಸಿದರು. ಶ್ವೇತಾ ಯರಗುದ್ದಿ ವಂದಿಸಿದರು. ಸ್ಪೀಡ್‌ ಕೆಸಾಪ್ಸ್ ಟ್ರಕರ್ ಟಿಐ ಸಿಬ್ಬಂದಿ ಹರೀಶ ಪಾಟೀಲ, ಸಂತೋಷ ಕಾನಪೇಟ್‌, ಸಿದ್ರಾಯಿ ಭಜಂತ್ರಿ ಹಾಜರಿದ್ದರು.
 

Trending videos

Back to Top