CONNECT WITH US  

ಭಾಷೆ ಅಭಿವೃದ್ಧಿಗೆ ಅಕಾಡೆಮಿಗಳು ಕೆಲಸ ಮಾಡಬೇಕು: ಸಚಿವ ರೈ

ಮಂಗಳೂರು: ಭಾಷೆ ಬಳಕೆ ಕಡಿಮೆಯಾದಂತೆ, ನಶಿಸಿ ಹೋಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಭಾಷೆ ಅಭಿವೃದ್ಧಿಗೆ ಅಕಾಡೆಮಿಗಳು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಪಟ್ಟರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಟಿ.ವಿ. ರಮಣ ಪೈ ಕನ್ವೆನÒನ್‌ ಸೆಂಟರ್‌ನಲ್ಲಿ ಶನಿವಾರ ಏರ್ಪಡಿಸಲಾದ "ಬ್ಯಾರಿ ಬಾಸೆರೊ ದಿನಾಚರಣೆ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಾಹಿತ್ಯಕ್ಕೂ ಪ್ರೋತ್ಸಾಹ ಅಗತ್ಯ
ಸಾಕಷ್ಟು ಭಾಷೆಗಳು ಈಗಾಗಲೇ ನಶಿಸಿ ಹೋಗುವ ಹಂತದಲ್ಲಿವೆ. ಹಿಂದೆ ಮರಾಠಿ ನಾಯ್ಕ ಸಮುದಾಯ ಮರಾಠಿ ಭಾಷೆ ಮಾತನಾಡುತ್ತಿತ್ತು. ಆದರೆ, ಇತ್ತೀಚೆಗೆ ಈ ಭಾಷೆ ಶೇ. 70ರಿಂದ 80ರಷ್ಟು ನಶಿಸಿ ಹೋಗಿದೆ. ಎಲ್ಲ ಭಾಷೆಗಳಲ್ಲಿ ಸಾಕಷ್ಟು ಸಾಹಿತ್ಯಗಳಿವೆ. ಆದ್ದರಿಂದ, ಭಾಷೆಗಳನ್ನು ಬೆಳೆಸುವುದರೊಂದಿಗೆ ಆಯಾಯ ಭಾಷಾ ಅಕಾಡೆಮಿಗಳು ಸಾಹಿತ್ಯಕ್ಕೂ ಪ್ರೋತ್ಸಾಹ ನೀಡಬೇಕು. ಮುಂದಿನ ದಿನಗಳಲ್ಲಿ ನಾನೂ ಪರಿಪೂರ್ಣ ಬ್ಯಾರಿ ಭಾಷೆ ಮಾತನಾಡಲು ಕಲಿಯುತ್ತೇನೆ ಎಂದರು.

ಈ ಸಂದರ್ಭ ಫಕ್ರುದ್ದೀನ್‌ ಇರುವೈಲ್‌ ರಚಿತ "ಕಿರ್ಫಾ' ಕಥಾ ಸಂಕಲನವನ್ನು ರಮಾನಾಥ ರೈ ಲೋಕಾರ್ಪಣೆ ಮಾಡಿದರು.

ಎಲ್ಲ ಭಾಷೆಯನ್ನೂ ಪ್ರೀತಿಸಿಶಾಸಕ ಜೆ.ಆರ್‌. ಲೋಬೊ ಮಾತನಾಡಿ, ಭಾಷೆ ಬೆಳವಣಿಗೆಗೆ ರಾಜಾಶ್ರಯದ ಅಗತ್ಯವಿದೆ. ಹಿಂದೆ ಪ್ರತಿಯೊಂದಕ್ಕೂ ರಾಜರು ಆಶ್ರಯ ನೀಡುತ್ತಿದ್ದರು. ಆದರೆ, ಪ್ರಸ್ತುತ, ಈ ಜವಾಬ್ದಾರಿ ಜನರ ಮೇಲಿದ್ದು, ಭಾಷಾ ಪ್ರೇಮಿಗಳ ರಾಜಾಶ್ರಯದಲ್ಲೇ ಹಲವು ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿವೆ. ಮಂಗಳೂರಿನಲ್ಲಿ ತುಳು, ಬ್ಯಾರಿ ಹಾಗೂ ಕೊಂಕಣಿ ಅಕಾಡೆಮಿಗಳಿದ್ದು, ಭಾಷೆ ಮತ್ತು ಸಂಸ್ಕೃತಿಯಲ್ಲಿ ಸಾಕಷ್ಟು ಶ್ರೀಮಂತಿಕೆ ಹೊಂದಿವೆ. ಬ್ಯಾರಿ ಭಾಷೆಯೂ ತನ್ನದೇ ಆದ ಸಂಸ್ಕೃತಿ ಹಾಗೂ ಪರಂಪರೆ ಹೊಂದಿದೆ. ಭಾಷೆ ಒಂದು ಮಾಧ್ಯಮವಾಗಿದ್ದು, ವಿವಿಧ ಚಿಂತನೆಗಳನ್ನು ಭಾಷೆ ಮಾಧ್ಯಮದ ಮೂಲಕ ಬೆಳೆಸಬೇಕು. ಯಾವುದೇ ಭಾಷೆ ಮೇಲು ಕೀಳೆಂದು ಭಾವಿಸದೆ ಎಲ್ಲವನ್ನೂ ಪ್ರೀತಿಸಬೇಕು. ಅಲ್ಲದೆ, ನಮ್ಮ ಮಾತೃ ಭಾಷೆಯನ್ನು ಹೆಚ್ಚು ಗೌರವಿಸಬೇಕು ಎಂದರು.

ಭಾಷೆ ಬಳಸಿದರೆ, ಉಳಿವು
ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್‌ ಕ್ಯಾಸ್ತಲಿನೊ ಮಾತನಾಡಿ, ಎಲ್ಲ ಭಾಷೆಗಳನ್ನು ಕಲಿತಂತೆ ಸಂಸ್ಕೃತಿಯೊಂದಿಗೆ ಸೌಹಾರ್ದತೆಯೂ ಬೆಳೆಯುತ್ತದೆ. ಭಾಷೆಗಳನ್ನು ಬಳಸಿದಂತೆ, ಅವುಗಳನ್ನು ಉಳಿಸಲು ಸಾಧ್ಯ ಎಂದರು.

ಎಂ.ಜಿ. ರಹೀಂ ಅವರಿಂದ ಏರ್ಪಡಿಸಲಾದ ಬ್ಯಾರಿ ಕಾರ್ಯಕ್ರಮಗಳ ಫೋಟೊಗಳು ಹಾಗೂ ಸಿಡಿ, ಡಿವಿಡಿ ಸ್ಟಾಲ್‌, ಪೋಟೋ ಜರ್ನಲಿಸ್ಟ್‌ ಅಹ್ಮದ್‌ ಅನ್ವರ್‌ ಅವರ ಬ್ಯಾರಿ ಪೋಟೋ ಪ್ರದರ್ಶನ ಹಾಗೂ ಅಕಾಡೆಮಿಯ ಪುಸ್ತಕ ಸ್ಟಾಲ್‌ ಅನ್ನು ಶಾಸಕ ಜೆ.ಆರ್‌. ಲೋಬೊ ಉದ್ಘಾಟಿಸಿದರು.

ಕಾರ್ಯಕ್ರಮದ ಪೂರ್ವಭಾವಿಯಾಗಿ "ಬ್ಯಾರಿ ಭಾಷೆ ದಿನಾಚರಣೆ' ಕುರಿತ ಲಾಂಛನ ಅನಾವರಣಗೊಳಿಸಲಾಯಿತು.
ಸಮ್ಮಾನ, ಗೌರವ ಬ್ಯಾರಿ ಭಾಷೆ ಮಾತನಾಡಬಲ್ಲ ಬ್ಯಾರಿಯೇತರರಾದ ರಘುನಾಥ ಶೆಣೈ ಬಜ್ಪೆ ಅವರನ್ನು ಗೌರವಿಸಲಾಯಿತು.

ಭಾಷಾ ಅಭಿವೃದ್ಧಿಗೆ ಶ್ರಮಿಸಿದ ಸಾಹಿತಿಗಳಾದ ಮುಹಮ್ಮದ್‌ ಬಡೂxರು, ಅಬ್ದುಲ್‌ ಖಾದರ್‌ ಕುತ್ತೆತ್ತೂರು, ಬಶೀರ್‌ ಅಹ್ಮದ್‌ ಕಿನ್ಯಾ, ಅಬ್ದುಲ್‌ ಅಝೀಝ್ ಹಕ್‌, ಅಶ್ರಫ್‌ ಅಪೊಲೊ, ರಶೀದ್‌ ನಂದಾವರ, ಮರಿಯಮ್‌ ಇಸ್ಮಾಯಿಲ್‌, ಆಯಿಶಾ ಯು.ಕೆ. ಉಳ್ಳಾಲ ಅವರನ್ನು ಸಮ್ಮಾನಿಸಲಾಯಿತು.

ವಿವಿಧ ಬ್ಯಾರಿ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ, ವಿದೇಶದಲ್ಲಿದ್ದು ಬ್ಯಾರಿ ಭಾಷೆಯ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದವರಿಗೆ, ಗಡಿನಾಡಿನಿಂದ ಗುರುತಿಸಲ್ಪಟ್ಟ ಸಾಹಿತಿ ಮೆಟ್ರೋ ಮೊಹಮ್ಮದ್‌ ಹಾಜಿ, ಬ್ಯಾರಿ ಚಲನಚಿತ್ರ ನಿರ್ಮಿಸಿದ ಅಲ್ತಾಫ್‌ ಹುಸೇನ್‌ ಕೃಷ್ಣಾಪುರ, ಬ್ಯಾರಿ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮ ಬೆಳವಣಿಗೆಗೆ ಶ್ರಮಿಸಿದ ಎಂ.ಜಿ. ರಹೀಂ ಅವರನ್ನು ಸಮ್ಮಾನಿಸಲಾಯಿತು.

ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆಯ ವಿಜೇತರಿಗೆ ಶಾಸಕ ಬಿ.ಎ. ಮೊಯ್ದಿàನ್‌ ಬಾವಾ ಬಹುಮಾನ ವಿತರಿಸಿದರು.

ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ. ಮೊಹಿದ್ದೀನ್‌, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ'ಸೋಜಾ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಕಾರ್ಪೋರೇಟರ್‌ ರಾಜೇಂದ್ರ ಕುಮಾರ್‌, ವಕೀಲರ ಸಂಘದ ಅಧ್ಯಕ್ಷ ಎಸ್‌.ಪಿ. ಚೆಂಗಪ್ಪ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್‌ ಹನೀಫ್‌, ವಿ.ವಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸತ್ಯನಾರಾಯಣ ಮಲ್ಲಿಪಟ್ಣ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ, ಮುಮ್ತಾಝ್ ಅಲಿ, ನಾಸಿರ್‌ ಸಜಿಪ, ಪತ್ರಕರ್ತ ಹಂಝ ಮಲಾರ್‌ ಮೊದಲಾದವರು ಉಪಸ್ಥಿತರಿದ್ದರು.

Trending videos

Back to Top