CONNECT WITH US  

ಗುರುಗಳ ಆಶೀರ್ವಾದದಿಂದ ಸಕಲ ಉನ್ನತಿ: ನಳಿನ್‌

ಮಂಗಳೂರು: ಹಿಂದೂ ಧರ್ಮದಲ್ಲಿ ಭಗವಂತ ಮತ್ತು ಗುರುವಿನ ಮೇಲಿನ ನಂಬಿಕೆ ಶ್ರೇಷ್ಠವಾಗಿದೆ. ಗುರುಗಳ ಆಶೀರ್ವಾದದಿಂದ ಸಕಲ ಉನ್ನತಿ ಸಾಧ್ಯ ಎಂದು ಸಂಸದ ನಳಿನ್‌ಕುಮಾರ್‌ ಕಟೀಲು ಅಭಿಪ್ರಾಯಪಟ್ಟರು.

ಮಂಗಳೂರಿನ ಹತ್ತು ಸಮಸ್ತರ ವತಿಯಿಂದ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ತುಲಾಭಾರ ಹಾಗೂ ಗುರುವಂದನ ಕಾರ್ಯಕ್ರಮದಲ್ಲಿ ಅವರು ಶುಕ್ರವಾರ ಮುಖ್ಯ ಅತಿಥಿಯಾಗಿದ್ದರು.

ಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಪಿ. ಜಯರಾಮ ಭಟ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಮೀಜಿ ಮಂಗಳೂರಿಗೆ ಬಂದು ಆಶೀರ್ವಚನ ನೀಡುತ್ತಿರುವುದು ನಮಗೊದಗಿದ ಸುಯೋಗ ಎಂದರು.

ಶರವು ಮಹಾಗಣಪತಿ ದೇವಸ್ಥಾನದ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ಕುಮಾರ್‌ ರೈ, ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಒಬಿಸಿ) ಪ್ರಧಾನ ಕಾರ್ಯದರ್ಶಿ ಅಮೃತ್‌ ವಿ. ಕದ್ರಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮೊಕ್ತೇಸರ ರವಿಶಂಕರ ಮಿಜಾರ್‌, ಹತ್ತು ಸಮಸ್ತರು ಮಂಗಳೂರು ಇದರ ಅಧ್ಯಕ್ಷ ಅಚ್ಯುತ ಭಟ್‌, ಮಂಗಳೂರು ಶ್ರೀ ರಾಘವೇಂದ್ರ ಮಠದ ಆಡಳಿತ ಮಂಡಳಿಯ ಟಿ.ಎಸ್‌. ಶ್ರೀಪೂರ್ಣ ಮುಖ್ಯ ಅತಿಥಿಗಳಾಗಿದ್ದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌. ಪ್ರದೀಪಕುಮಾರ ಕಲ್ಕೂರ ಪ್ರಸ್ತಾವನೆಗೈದರು. ಕದ್ರಿ ಶ್ರೀ ಕೃಷ್ಣ ಯಕ್ಷಸಭಾದ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್‌ ಪೇಜಾವರ ನಿರೂಪಿಸಿದರು.

Trending videos

Back to Top