CONNECT WITH US  

'ಸಂತರ ನೇತೃತ್ವದಲ್ಲಿ ಹಿಂದೂ ಧರ್ಮದ ರಕ್ಷಣೆ'

ಮೂಡಬಿದಿರೆ: 'ಹಿಂದೂಗಳನ್ನು ಆಡಳಿತ ವ್ಯವಸ್ಥೆ ಯಾವ ರೀತಿ ನೋಡುತ್ತಿದೆ ಎಂಬುದಕ್ಕೆ ಹಿಂದೂ ಧರ್ಮಕ್ಕೋಸ್ಕರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್‌ ಪೂಜಾರಿ ಕೊಲೆ ಪ್ರಕರಣ ಸಾಕ್ಷಿಯಾಗಿದೆ.  ಕೇಸರಿ ಶಾಲು, ವಸ್ತ್ರ ಧರಿಸಿ ಓಡಾಡಲಾರದಂಥ ಸ್ಥಿತಿ ನಿರ್ಮಾಣವಾಗಿರುವುದು ಖೇದಕರ. ಹಿಂದೂ ಯುವಕರ ಕೊಲೆ, ಹಲ್ಲೆ ಪ್ರಕರಣಗಳು ಇನ್ನು ಮುಂದೆ ನಡೆದರೆ. ಪ್ರಕರಣಗಳನ್ನು ಸೂಕ್ತ ರೀತಿ ತನಿಖೆ ಮಾಡದೇ ತಪ್ಪಿತಸ್ಥರನ್ನು ರಕ್ಷಣೆ ಮಾಡಿದರೆ ಸಂತರ ನೇತೃತ್ವದಲ್ಲಿ ಪ್ರತಿಯೊಬ್ಬ ಹಿಂದೂಗಳನ್ನು ಒಗ್ಗೂಡಿಸಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ' ಎಂದು ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ತಿಳಿಸಿದ್ದಾರೆ.

ದುಷ್ಕರ್ಮಿಗಳಿಂದ ಕಳೆದ ಶುಕ್ರವಾರ ಹತ್ಯೆಗೀಡಾಗಿದ್ದ  ಬಜರಂಗ ದಳ ಕಾರ್ಯಕರ್ತ ಪ್ರಶಾಂತ್‌ನ ಮನೆಗೆ ಭೇಟಿ ನೀಡಿದ ಸ್ವಾಮೀಜಿ ಅವರು ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿದರು.

ಮುಖಂಡರಾದ ಕೃಷ್ಣರಾಜ ಹೆಗ್ಡೆ, ದೇವಿಪ್ರಸಾದ್‌ ಶೆಟ್ಟಿ, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಲಕ್ಷ್ಮಣ ಪೂಜಾರಿ, ಪ್ರಸಾದ್‌ ಕುಮಾರ್‌, ದಿನೇಶ್‌, ಹಿಂದೂ ಸಂಘಟನೆಗಳ ಕಾರ್ಯಕರ್ತರಾದ ಗೋಪಾಲ್‌ ಶೆಟ್ಟಿಗಾರ್‌, ಅಶೋಕ್‌, ವಿಶ್ವನಾಥ್‌ ಶೆಟ್ಟಿ, ಸಂದೀಪ್‌ ಶೆಟ್ಟಿ, ರಂಜಿತ್‌ ಮೊದಲಾದವರಿದ್ದರು.


Trending videos

Back to Top