CONNECT WITH US  

ತುಳು ಚಿತ್ರರಂಗದ ರಾಜ್‌ಕುಮಾರ್‌ ಕೆ.ಎನ್‌ .ಟೈಲರ್‌ ಇನ್ನಿಲ್ಲ

ಮಂಗಳೂರು :  ತುಳು ಚಿತ್ರರಂಗದಲ್ಲಿ 10 ಚಲನಚಿತ್ರಗಳನ್ನು ನಿರ್ಮಾಣ ಮಾಡಿ, ನಿರ್ದೇಶಿಸಿ, ನಾಯಕನಾಗಿ ನಟಿಸಿ ಎಪ್ಪತ್ತು, ಎಂಬತ್ತರ ದಶಕದಲ್ಲಿ ತುಳು ಚಿತ್ರರಂಗದ ರಾಜ್‍ಕುಮಾರ್ ಎಂದು ಕರೆಸಿಕೊಂಡಿದ್ದ ಕೆ.ಎನ್.ಟೈಲರ್ (76) ಅವರು ಬುಧವಾರ ಮಂಗಳೂರಿನ ವಿನಯ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 

ಕಳೆದ ಕೆಲ ದಿನಗಳಿಂದ ಆನಾರೋಗ್ಯ ಪೀಡಿ ತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 

ಕನ್ನಡ ಚಿತ್ರರಂಗದ ಮೇರು ನಟ ನಟಿಯರಾದ ಕಲ್ಪನಾ,  ಗೀತಪ್ರಿಯ, ಲೀಲಾವತಿ, ರತ್ನಮಾಲಾ, ಸರೋಜಿನಿ ಶೆಟ್ಟಿ, ಜಯಶೀಲ, ಬಿ.ವಿ.ರಾಧಾ, ಸುಮಿತ್ರಾ, ಮಮತಾ ಶೆಣೈ, ತಾರಾ, ಮೊದಲಾದವರನ್ನು ತುಳು ಚಿತ್ರರಂಗಕ್ಕೆ ಕರೆತಂದ ಶ್ರೇಯಸ್ಸು  ಕೆ.ಎನ್.ಟೈಲರ್‍ ಅವರಿಗೆ ಸಲ್ಲುತ್ತದೆ. 

ಗಣೇಶ ನಾಟಕ ಸಭಾ ತಂಡ ಕಟ್ಟಿ ಕಳೆದ 50 ವರ್ಷಕ್ಕೂ ಮಿಕ್ಕಿ ಕಲಾಮಾತೆಯ ಸೇವೆ ಮಾಡಿರುವ ಕೆ.ಎನ್. ಟೈಲರ್‍ರವರು ಹಲವು ಕಲಾವಿದರು ಮತ್ತು ತಂತ್ರಜ್ಞರನ್ನು  ಕನ್ನಡ ಚಿತ್ರ ರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ ಸಹಿತ ಅನೇಕ ಸನ್ಮಾನಗಳು ಟೈಲರ್‌ ಅವರಿಗೆ ಲಭಿಸಿವೆ

Trending videos

Back to Top