CONNECT WITH US  

ಡಿಜಿಟಲ್‌ ಮಾಧ್ಯಮ ಬಗ್ಗೆ ಎಚ್ಚರವಹಿಸಿ

ಮಂಡ್ಯ: ಡಿಜಿಟಲ್‌ ಮಾಧ್ಯಮ ಬದಲಾವಣೆ ಕಾಣುತ್ತಿರುವಂತೆಯೇ ಸಮಸ್ಯೆಗಳೂ ಸಹ ಹೆಚ್ಚಾಗುತ್ತಿವೆ
ಎಂದು ಬಿಜೆಪಿ ಮುಖಂಡ ಎಚ್‌.ಆರ್‌. ಅರವಿಂದ್‌ ತಿಳಿಸಿದರು. ಮಾಂಡವ್ಯ ವೃತ್ತಿಪರ ಛಾಯಾಚಿತ್ರ ಗ್ರಾಹಕರ ಸಂಘ ಹಾಗೂ ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಬುಧವಾರ ಆಯೋಜಿಸಿದ್ದ 179ನೇ ವಿಶ್ವಗ್ರಾಹಕರ ದಿನಾಚರಣೆ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಹಲವು ಛಾಯಾಗ್ರಾಹಕರು ಸಾಕಷ್ಟು ಬಾರಿ ಡಿಜಿಟಲ್‌ ಮೀಡಿಯಾದಲ್ಲಿ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ.
ಹಾರ್ಡ್‌ಡಿಕ್ಸ್‌, ಮೆಮೋರಿ ಚಿಪ್‌ನಲ್ಲಿ ಫೋಟೋ, ವಿಡಿಯೋ ಡಿಲಿಟ್‌ ಆಗಿದೆ ಎನ್ನುತ್ತಾರೆ. ಡಿಜಿಟಲ್‌ ಮೀಡಿಯಾದ
ಅನುಕೂಲ ಪಡೆದುಕೊಳ್ಳುವುದರ ಜೊತೆಗೆ ಎಚ್ಚರಿಕೆ ವಹಿಸದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

ಕಾವೇರಿ ಕಲರ್‌ ಲ್ಯಾಬ್‌ ಮಾಲಿಕ ಕೆ.ಎಸ್‌.ಸಂದೀಪ್‌ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ನಾವು ಯಾವಾಗಲೂ ಸಕ್ರಿಯವಾಗಿರುತ್ತೇವೆ. ಮುಖಾ ಮುಖೀ ಭೇಟಿ ಸಾಧ್ಯವಾಗುತ್ತಿರಲಿಲ್ಲ. ವಿಶ್ವ ಛಾಯಾಗ್ರಾಹಕರ ದಿನದೊಂದಿಗೆ ಮುಖಾಮುಖೀ ಭೇಟಿ ಯಾಗಿದ್ದು, ಸಂತಸ ಉಂಟು ಮಾಡಿದೆ ಎಂದರು.

ಛಾಯಾಗ್ರಾಹಕರ ವೃತ್ತಿ ಬಹಳ ಸಂಕಷ್ಟದಲ್ಲಿದೆ. ವರ್ಷ ಪೂರ್ತಿ ವೃತ್ತಿ ನಡೆ ಯುವುದಿಲ್ಲ. ವೃತ್ತಿ ಚೆನ್ನಾಗಿ ನಡೆಯುವ
ಕಾಲದಲ್ಲಿ ಹಣ ಸಂಪಾದಿಸಿ, ಕೂಡಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂಘದ ಗೌರವಾಧ್ಯಕ್ಷ ಐ.ಎನ್‌. ರಾವ್‌, ಜಿಲ್ಲಾಧ್ಯಕ್ಷಬಿ.ಎಸ್‌.ಜಗದೀಶ್‌, ಎನ್‌.ಚಂದ್ರಶೇಖರ್‌, ಎಂ.ಕುಮಾರ್‌, ಎಸ್‌.ಸತ್ಯನಾರಾಯಣ, ಕೆ.ಕೆ.ಪ್ರಭು, ಬಾಲಚಂದ್ರ, ಕೆ.ರೂಬೆನ್‌ ಇತರರು ಉಪಸ್ಥಿತರಿದ್ದರು. 


Trending videos

Back to Top