CONNECT WITH US  

ಮುಂದಿನ ತಿಂಗಳಿಂದಲೇ ಕುರಿ ತೂಕಕ್ಕೆ ಯಂತ್ರದ ವ್ಯವಸ್ಥೆ

ಮಂಡ್ಯ: ಮುಂದಿನ ತಿಂಗಳಿನಿಂದ ರಾಜ್ಯದಲ್ಲಿ ನಡೆಯುವ ಎಲ್ಲಾ ಸಂತೆ-ಜಾತ್ರೆಗಳಲ್ಲಿ ಕುರಿ ತೂಕ ಯಂತ್ರಗಳನ್ನು ಅಳವಡಿಸುವ ಮೂಲಕ ದಲ್ಲಾಳಿಗಳಿಂದ ಕುರಿಗಾರರಿಗೆ ಆಗುತ್ತಿರುವ ಮೋಸವನ್ನು ತಪ್ಪಿಸಲಾಗುವುದು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಂಡಿತರಾವ್‌ ಚಿದ್ರಿ ಹೇಳಿದರು.

ಮಂಗಳವಾರ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ನಡೆದ ಕುರಿಗಾರರ ಜಿಲ್ಲಾ ಜಾಗೃತ ಸಮಾವೇಶದಲ್ಲಿ ಮಾತನಾಡಿ, ಕುರಿ ಮತ್ತು ಮೇಕೆ ಮಾಂಸದ ಬೆಲೆ ಮಾರುಕಟ್ಟೆಯಲ್ಲಿ 400 ರೂ.ಗಡಿ ತಲುಪಿದೆ. ಪ್ರಸ್ತುತ ಸಂತೆ ಮತ್ತು ಜಾತ್ರೆಗಳಲ್ಲಿ ಕುರಿಗಳ ತೊಡೆ ಹಿಡಿದು ಎತ್ತಿ ತೂಕ ಅಂದಾಜಿಸುವ ಅವೈಜಾnನಿಕ ವ್ಯವಸ್ಥೆ ಇದೆ. ಇದರಿಂದ ಕುರಿಗಾರರಿಗೆ ತೂಕದಲ್ಲಿ 2 ರಿಂದ 3 ಕೆಜಿಯಷ್ಟು ವಂಚನೆಯಾಗುತ್ತಿದೆ ಎಂದರು.

ಇದನ್ನು ತಪ್ಪಿಸುವ ಸಲುವಾಗಿ ಕುರಿ ತೂಕ ಮಾಡುವ ಯಂತ್ರಗಳನ್ನು ಸಂತೆ-ಜಾತ್ರೆಗಳಿಗೆ ನೀಡಲಾಗುವುದು. ಜೀವಂತ ಕುರಿಗಳನ್ನು ಯಂತ್ರಗಳ ಮೇಲೆ ನಿಲ್ಲಿಸಿ ತೂಗಿದ ಮೇಲೆ ಅದರ ಪ್ರಮಾಣವನ್ನು ಕುರಿಗಳ ಕೊರಳಿಗೆ ಕಟ್ಟಲಾಗುವುದು. ತೂಕ ಮಾಡುವುದಕ್ಕೆ ಪಡೆಯಲಾಗುವ 2 ರೂ. ಹಣದಲ್ಲಿ ಒಂದು ರೂಪಾಯಿಯನ್ನು ಎಪಿಎಂಸಿಗೂ ಹಾಗೂ ಇನ್ನೊಂದು ರೂಪಾಯಿಯನ್ನು ಸೊಸೈಟಿಗಳಿಗೆ ನೀಡಲಾಗುವುದು. 5ಕೋಟಿ ರೂ. ವೆಚ್ಚದಲ್ಲಿ ಯಂತ್ರಗಳನ್ನು ಖರೀದಿಸಿ ಆಗಸ್ಟ್‌ ತಿಂಗಳಿನಿಂದಲೇ ಸಂತೆ ಮತ್ತು ಜಾತ್ರೆಗಳಿಗೆ ನೀಡಲಾಗುವುದು ಎಂದರು.

ವಂಚನೆ:
ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನ ಪ್ರಕಾರ ಪ್ರತಿಯೊಬ್ಬ ಮನುಷ್ಯನಿಗೆ ವರ್ಷಕ್ಕೆ 11 ಕೆಜಿ ಮಾಂಸದ ಅಗತ್ಯವಿದೆ. ಆದರೆ, ಆತನಿಗೆ ಸಿಗುತ್ತಿರುವುದು 5.5 ಕೆಜಿ ಮಾತ್ರ. ಇನ್ನೂ 5.5 ಕೆಜಿ ಮಾಂಸದ ಕೊರತೆ ಎದುರಿಸುತ್ತಿದ್ದಾನೆ. ಪೌಷ್ಟಿಕಾಂಶದ ಕೊರತೆ ಎದುರಿಸುತ್ತಿದ್ದಾನೆ ಎಂದರು.

Trending videos

Back to Top