CONNECT WITH US  

ಹೂವಿನಂಥ ಹೂವು

ಜೇನುಕಣ್ಣಿನ ಚೆಲುವೆ ಸೋನಂ ಇಲ್ಲಿ ಜೇನುಬಣ್ಣದ ಗೌನ್‌ನಲ್ಲಿದ್ದಾರೆ. ಮೊಗ್ಗಿನ ಜಡೆ ಹಾಕಿ ಹೂ ದಂಡೆ ಮುಡಿದಿದ್ದಾರೆ. 

ಮೊಗ್ಗಿನ ಜಡೆಯಲ್ಲಿ ಹೊಸದೊಂದು ಟ್ರೆಂಡ್‌. ಸಾಂಪ್ರದಾಯಿಕ ಮೊಗ್ಗಿನ ಜಡೆಯ ಶೈಲಿ ಒಂದು ರೀತಿಯಾದರೆ ಇದು ಇನ್ನೊಂದು ಬಗೆ. ಮೊಗ್ಗಿನ ಜಡೆಯಲ್ಲಿ ಒತ್ತೂತ್ತಾಗಿ ಮದುಮಗಳಿಗೆ ಮುಡಿಸುವ ರೀತಿಯ ಜಡೆ ಇದ್ದರೆ ಇಲ್ಲಿ ಅಷ್ಟೆಲ್ಲ  ಕಷ್ಟ ಇಲ್ಲ. ಸಿಂಪಲ್ಲಾಗಿ ಜಡೆ ಹೆಣೆದು ಅದಕ್ಕೆ ಮಲ್ಲಿಗೆ ಮೊಗ್ಗಿನ ಹಾರವನ್ನು ಸುತ್ತಿದರಾಯ್ತು. ಬೇಕಾದರೆ ಜಡೆಗೆ ಹಾಕುವ ಮುಳ್ಳು ಚುಚ್ಚಿದರೂ ನಡೆಯುತ್ತೆ. 

ಸಹಜ ಕೂದಲು ಕೊಂಚ ಚಿಕ್ಕದಿದೆ. ಜಡೆ ಹಾಕಕ್ಕಾಗಲ್ಲ, ಅನ್ನುವವರು ಸಣ್ಣ ಚೌರಿಯನ್ನು ಕೂದಲಿಗೆ ಜೋಡಿಸಿ ಜಡೆ ಹಣೆಯಬಹುದು. ಅದರ ಸುತ್ತ ಮೊಗ್ಗಿನ ಮಾಲೆ ಸುತ್ತಬಹುದು. ಪಾರ್ಟಿಗೆ ತೊಡುವ ರೀತಿಯ ನೀಳವಾದ ಗೌನ್‌ಗೆ ಈ ಥರ ಜಡೆ ಹಾಕಿ ಹೂ ಮುಡಿದರೆ ಮಾರ್ವೆಲಸ್‌ ಲುಕ್‌. ಪಾರಂಪರಿಕತೆ ಹಾಗೂ ಆಧುನಿಕತೆ ಬೆರೆತ ಸಮಕಾಲೀನ ಟ್ರೆಂಡ್‌ನ‌ ಮೆತ್ತನೆಯ ನೆಲಹಾಸಿನಲ್ಲಿ ನೀವು ನಡೆಯಬಹುದು. 

ಜೇನುಕಣ್ಣಿನ ಚೆಲುವೆ ಸೋನಂ ಇಲ್ಲಿ ಜೇನುಬಣ್ಣದ ಗೌನ್‌ನಲ್ಲಿದ್ದಾರೆ. ಮೊಗ್ಗಿನ ಜಡೆ ಹಾಕಿ ಹೂ ದಂಡೆ ಮುಡಿದಿದ್ದಾರೆ. ಗ್ರೀಕ್‌ ಸುಂದರಿಯಂತೆ ಕಾಣುತ್ತಿರೋದು, ಗೌನ್‌ನಿಂದಲೊ, ನಿಲುವಿನಿಂದಲೊ ಗೊತ್ತಿಲ್ಲ. ಆದರೆ, ಆ ನಿಲುವನ್ನು ಇನ್ನಷ್ಟು ಆಕರ್ಷಕವಾಗಿಸುವಲ್ಲಿ ಒಂದೆಳೆ ಮಲ್ಲಿಗೆ ದಂಡೆಯ ಕೊಡುಗೆಯಂತೂ ಇದ್ದೇ ಇದೆ.

ಪ್ರತಿಸಲ ಮಲ್ಲಿಗೆ ದಂಡೆಯನ್ನೆಲ್ಲಿ ಹುಡುಕಿಕೊಂಡು ಹೋಗೋದು? ಹೀಗೆನ್ನುವವರು ಕೃತಕ ದಂಡೆಯನ್ನು ಮುಡಿಯಬಹುದು. ಮಲ್ಲಿಗೆಯನ್ನೇ ಯಥಾವತ್‌ ಹೋಲುವ ಸಾಕಷ್ಟು ವೆರೈಟಿ ದಂಡೆಗಳಿವೆ. ಇದರಲ್ಲಿ ನಿಮಗಿಷ್ಟವಾದದ್ದನ್ನು ಆರಿಸಿ. ಹೂ ಮುಡ್ಕೊಳ್ಳಿ, ಗೌನ್‌ ಹಾಕ್ಕೊಳ್ಳಿ. ಚೆಂದ ಕಾಣೊಳ್ಳಿ

Trending videos

Back to Top