CONNECT WITH US  

ದಸರಾ ಪ್ರಾಧಿಕಾರಕ್ಕಾಗಿ ಏಕಾಂಗಿ ಪ್ರತಿಭಟನೆ

ಮೈಸೂರು: ಮೈಸೂರು ದಸರಾ ಪ್ರಾಧಿಕಾರ ರಚಿಸಿ, ದಸರೆಯನ್ನು ನಾಡಹಬ್ಬ ಎಂದು ಅಧಿಕೃತವಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಕೆ.ಎಂ.ನಿಶಾಂತ್‌, ಅರಮನೆ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿದರು.

ಯದುವಂಶದ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್‌ ನಿಧನರಾದ ಬಳಿಕ ದಸರೆಯನ್ನು ನಾಡಹಬ್ಬ ಎಂದು ಸರ್ಕಾರವೇ ಆಚರಿಸುತ್ತಾ ಬಂದಿದ್ದರೂ ಈವರೆಗೂ ನಾಡಹಬ್ಬ ಎಂದು ಅಧಿಕೃತವಾಗಿ ಘೋಷಣೆಯಾಗಿಲ್ಲ. ಹೀಗಾಗಿ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ತರಾತುರಿಯ ಸಿದ್ಧತೆಗಳನ್ನು ಮಾಡಲಾಗುತ್ತದೆ.

ದಸರಾ ಮಹೋತ್ಸವಕ್ಕೆ ಕೇವಲ ಒಂದು ತಿಂಗಳು ಕಾಲಾವಕಾಶ ಇರುವಾಗ ಉಪ ಸಮಿತಿಗಳನ್ನು ರಚಿಸಿ, ಟೆಂಡರ್‌ ಕರೆಯಲಾಗುತ್ತದೆ. ದಸರಾ ಮಹೋತ್ಸವದಲ್ಲಿ ಕಾರ್ಯಕ್ರಮ ನೀಡಿದ ಕಲಾವಿದರಿಗೆ ವರ್ಷ ಕಳೆದರೂ ಸಂಭಾವನೆ ಪಾವತಿಯಾಗುವುದಿಲ್ಲ. ಅದರ ಬದಲಿಗೆ ದಸರಾ ಪ್ರಾಧಿಕಾರ ರಚಿಸಿ, ವರ್ಷವಿಡೀ ದಸರಾ ನಡೆಯುವಂತೆ ಕಾರ್ಯಕ್ರಮ ರೂಪಿಸಬೇಕು. 

ವಿಂಬಲ್ಡನ್‌ ಕ್ರೀಡಾ ಸಿದ್ಧತೆಯ ಮಾದರಿಯಲ್ಲೇ ದಸರೆ ಮುಗಿದ ಕೂಡಲೇ ಮುಂದಿನ ವರ್ಷದ ವರ್ಷದ ದಸರೆಯ ರೂಪುರೇಷೆಗಳು ಸಿದ್ಧಗೊಳ್ಳಬೇಕು. ಆ ರೀತಿ ವರ್ಷಪೂರ್ತಿ ದಸರಾ ಚಟುವಟಿಕೆಯಿಂದ ಕೂಡಿರುವ ದಸರಾ ಪ್ರಾಧಿಕಾರ ರಚನೆಯಾಗಬೇಕು ಎಂದು ಒತ್ತಾಯಿಸಿದರು.


Trending videos

Back to Top