CONNECT WITH US  

ಭೈರಪ್ಪ, ನಾಗತ್ತಿಹಳ್ಳಿಗೆ ಡಾಕ್ಟರೆಟ್‌ ಪ್ರದಾನ

ಮೈಸೂರು: ಜ್ಞಾನ, ವಿದ್ವಾಂಸ, ಪ್ರತಿಭಾ ಪರಂಪರೆಗೆ ಹೆಸರುವಾಸಿಯಾದ ಮೈಸೂರು ವಿವಿ ವತಿಯಿಂದ ಕಾದಂಬರಿಕಾರ ಪೊ›.ಎಸ್‌.ಎಲ್‌.ಭೈರಪ್ಪ ಹಾಗೂ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

ಕ್ರಾಫ‌ರ್ಡ್‌ ಭವನದಲ್ಲಿ ಶುಕ್ರವಾರ ನಡೆದ ವಿವಿಯ 95ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ವಿವಿಯ ಕುಲಾಧಿಪತಿಗಳಾದ ರಾಜ್ಯಪಾಲ ವಾಜುಭಾಯ್‌ ವಾಲಾ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು. ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿದ್ದ ಐಟಿ ದಿಗ್ಗಜ ಡಾ.ಅಜೀಂ ಪ್ರೇಮ್‌ಜೀ ಸಮಾರಂಭಕ್ಕೆ ಗೈರಾಗಿದ್ದರು. ಇದೇ ಸಂದರ್ಭದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ 28,580 ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಯಿತು.

28,580 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ವಿವಿ ವ್ಯಾಪ್ತಿಯ 28,580 ವಿದ್ಯಾರ್ಥಿಗಳಿಗೆ (16,259 ಮಹಿಳೆಯರು-ಶೇ.57 ಮತ್ತು 12,321 ಪುರುಷರು- ಶೇ.43) ವಿದ್ಯಾರ್ಥಿಗಳಿಗೆ ವಿವಿಧ ಪದವಿ ಮತ್ತು ಸ್ನಾತ್ತಕೋತ್ತರ ಪದವಿ ಪ್ರದಾನ ಮಾಡಲಾಯಿತು. ಇವರಲ್ಲಿ 21,683 (ಮಹಿಳೆಯರು-12,665, ಪುರುಷರು-9018) ಬ್ಯಾಚುಲರ್‌ ಪದವಿ, ಹಾಗೂ 6507 (ಮಹಿಳೆಯರು-3461, ಪುರುಷರು-3046) ಜನರಿಗೆ ಸ್ನಾತಕೋತ್ತರ ಪದವಿ ಹಾಗೂ 390 (ಪುರುಷರು-257, ಮಹಿಳೆಯರು-133,) ಮಂದಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು.

202 ಮಂದಿಗೆ ಚಿನ್ನದ ಪದಕ, ಬಹುಮಾನ: ವಿವಿಧ ವಿಷಯಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 202 ವಿದ್ಯಾರ್ಥಿಗಳಿಗೆ ವಿವಿಯಲ್ಲಿ ವಿವಿಧ ಮಹನೀಯರ ಹೆಸರಲ್ಲಿ ಸ್ಥಾಪಿಸಿರುವ 318 ಚಿನ್ನದ ಪದಕ ಹಾಗೂ 172 ನಗದು ಬಹುಮಾನ ನೀಡಲಾಯಿತು. ಇವರ ಪೈಕಿ 123 ಮಂದಿ ಮಹಿಳೆಯರಿಗೆ ಮತ್ತು 79 ಪುರುಷರಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ನೀಡಲಾಯಿತು.

ಚಿನ್ನದ ಪದಕ ವಿಜೇತರು
ಕಲಾ ನಿಕಾಯದಲ್ಲಿ ಶೃತಿ ಕೃಷ್ಣ ಎಂಎನಲ್ಲಿ 12 ಚಿನ್ನದ ಪದಕ, 3 ನಗದು ಬಹುಮಾನ ಸೇರಿ ಒಟ್ಟು 15 ಬಹುಮಾನಗಳನ್ನು ಪಡೆಯುವ ಮೂಲಕ ಗಮನ ಸೆಳೆದರು. ಎಂಎನಲ್ಲಿ ಆರ್‌.ಅನುಸೂಯ 6 ಚಿನ್ನದ ಪದಕ, 2 ನಗದು, ಎಚ್‌.ಎನ್‌.ಮನುಕುಮಾರ್‌ 2 ಚಿನ್ನದ ಪದಕ, 3 ನಗದು, ಎಲ್‌ಎಲ್‌ಎಂನಲ್ಲಿ ಅಸ್ಮತುನ್ನಿಸಾ 3 ಚಿನ್ನದ ಪದಕ, 3 ನಗದು ಹಾಗೂ ಬಿಎನಲ್ಲಿ ಎ.ಎಸ್‌.ತೇಜಸ್ವಿನಿ 5 ಚಿನ್ನದ ಪದಕ, 4 ನಗದು ಬಹುಮಾನ, ಎಂ.ಎಸ್‌.ಲಾವಣ್ಯ 4 ಪದಕ, 5 ಬಹುಮಾನ, ಬಿಎಫ್ಎನಲ್ಲಿ ಟಿ.ಎಚ್‌.ಯಶಸ್ವಿ 6 ಚಿನ್ನದ ಪದಕ, 2 ನಗದು ಬಹುಮಾನ, ಬಿಕಾಂನಲ್ಲಿ ಸಿ.ಮಮತಾ 2 ಪದಕ, 3 ನಗದು, ಎಸ್‌.ಶ್ವೇತಾ 2 ಚಿನ್ನದ ಪದಕ, 3 ನಗದು ಬಹುಮಾನ ಪಡೆದರು.

ವಿಜಾnನ ಮತ್ತು ತಂತ್ರಜಾnನ ನಿಕಾಯದಲ್ಲಿ ಎಂಎಸ್ಸಿನಲ್ಲಿ ಕೆ.ಎಲ್‌.ಶ್ವೇತಾ 10 ಚಿನ್ನದ ಪದಕ, 3 ನಗದು ಬಹುಮಾನ ಸೇರಿ 13 ಬಹುಮಾನಗಳನ್ನು ಸ್ವೀಕರಿಸಿದರು. ಆರ್‌.ಪವನ್‌ 7 ಚಿನ್ನದ ಪದಕ, 3 ನಗದು, ಹೇಮಾ ನಾಯಕ್‌ 5 ಚಿನ್ನದ ಪದಕ, 1 ನಗದು, ಜಿ.ಎಚ್‌.ಸೂರ್ಯತೇಜ 4 ಪದಕ, 1 ನಗದು, ಎ.ದರ್ಶನ್‌ 3 ಪದಕ, 2 ನಗದು, ಎಂ.ವಿ.ಕೇಶವಮೂರ್ತಿ 3 ಪದಕ, 2 ನಗದು, ನಿವೇದಿತಾ ನಿತ್ಯಾನಂದ 3 ಪದಕ, 2 ನಗದು, ಎಂ.ಆರ್‌.ಅಭಿಲಾಷ್‌ 4 ಪದಕ, 1 ನಗದು, ಸಕೀನಾ ದೇವಸ್ವಾಲಾ 1 ಪದಕ, 4 ನಗದು ಬಹುಮಾನ ಪಡೆದರೆ, ಎಂಟೆಕ್‌(ಯುಆರ್‌ಪಿ)ನಲ್ಲಿ ಶಾಲೋಮ್‌ ಸನ್ನುತ 5 ಚಿನ್ನದ ಪದಕ ಹಾಗೂ 1 ನಗದು, ಬಿಎಸ್ಸಿನಲ್ಲಿ ಎಸ್‌.ಕೋಕಿಲ 4 ಚಿನ್ನದ ಪದಕ, 6 ನಗದು, ಸಿಂಧು ಆರ್‌. ಉಡುಪ 2 ಚಿನ್ನದ ಪದಕ, 4 ನಗದು ಬಹುಮಾನ ಪಡೆದುಕೊಂಡರು.

Trending videos

Back to Top