CONNECT WITH US  

​ಕುಸ್ತಿ: ಪೈ.ಶಶಿರಾಜ್‌ ಬೋಲಾ ಭೀಮ ಕೇಸರಿ

ನಂಜನಗೂಡು: ಇಲ್ಲಿನ ಭೀಮಾ ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಬಳಗದ ಆಶ್ರಯದಲ್ಲಿ 3ನೇ ವರ್ಷದ ರಾಜ್ಯ ಮಟ್ಟದ 25 ಜೊತೆ ಕಾಟಾ ಕುಸ್ತಿ ಪಂದ್ಯಾವಳಿಯನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮ ದಿನಾಚರಣೆ ಅಂಗವಾಗಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿತ್ತು.

ಸೋಲು ಗೆಲುವಿನ ತನಕ ನಡೆದ ಪ್ರಮುಖ ಕುಸ್ತಿಯಲ್ಲಿ ಪಟ್ಟಣದ ಶಂಕರ ಪುರದ ಪೈಲ್ವಾನ್‌ ಶಶಿರಾಜ್‌ ಬೋಲಾ, ಶ್ರೀರಂಗಪಟ್ಟಣದ ಪೈಲ್ವಾನ್‌ ಮಂಜುಟಗರು, ನಡುವೆ ನಡೆದ 40 ನಿಮಿಷದ ಕಾದಾಟ ನಡೆಯಿತು. ಅಂತಿಮವಾಗಿ ಶಶಿರಾಜ್‌ ಬೋಲಾ ವಿಜೇತರಾಗಿ ಭೀಮಕೇಸರಿ ಬಿರುದು ಬೆಳ್ಳಿ ಗದೆಯನ್ನು ಮುಡಿಗೇರಿಸಿದರು.

ರೋಚಕವಾಗಿ ಮತ್ತೂಂದು ಪಂದ್ಯದಲ್ಲಿ ಕೊಲ್ಹಾಪುರದ ಪೈ.ಸಿಕಂದರ್‌, ಮೈಸೂರಿನ ಕೆ.ಜಿ ಕೊಪ್ಪಲಿನ ಪೈ.ರಮೇಶ್‌ ಪವರ್‌ ಅವರನ್ನು ಸೋಲಿಸಿ ಜಯಶೀಲರಾದರು. ಪಟ್ಟಣದ ಒಕ್ಕಲಗೇರಿ ಗರಡಿಯ ಪೈ.ಸಿದ್ದರಾಜು ಶಿಷ್ಯ ಪೈ.ಸ್ಟಾರ್‌ ಭರತ್‌ ಉತ್ತಮ ಕ್ರೀಡಾ ಪಟು ಬಿರುದು ಪಡೆದರು. ಅಲ್ಲದೆ ದಿ| ಟಿ.ಎನ್‌ ನಂಜಯ್ಯ ಪ್ರಶಸ್ತಿಗೆ ಪಾತ್ರರಾದರು.

ಕುಸ್ತಿ ಪಂದ್ಯಾವಳಿಯನ್ನು ಕಂದಾಯ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌ ಉದ್ಘಾಟಿಸಿದರು. ಸಂಸದ ಆರ್‌.ಧ್ರುವನಾರಾಯಣ್‌, ಮೈಸೂರು ಮುಡಾ ಅಧ್ಯಕ್ಷ ಕೆ.ಆರ್‌.ಮೋಹನ್‌ ಕುಮಾರ್‌, ವಾಲ್ಮೀಕಿ ನಿಗಮದ ಅಧ್ಯಕ್ಷ ಎಸ್‌.ಸಿ.ಬಸವರಾಜು, ಯು.ಎನ್‌.ಪದ್ಮನಾಭರಾವ್‌, ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ, ಬಿಜೆಪಿ ಮುಖಂಡ ಎಸ್‌.ಮಹದೇವಯ್ಯ, ಜಿಪಂ ಸದಸ್ಯ ಚಿಕ್ಕರಂಗ ನಾಯಕ, ತೀರ್ಪುಗಾರರಾದ ಪೈ. ಅಮೃತ್‌ ಪುರೋಹಿತ್‌, ಪೈ.ಸಿದ್ದರಾಜು, ಗೋಳೂರು ಪೈ. ಶಿವಣ್ಣ, ಪೈ. ಬನ್ನೂರು ರವಿ, ನಟೇಶ್‌ ಇತರರು ಉಪಸ್ಥಿತರಿದ್ದರು.

Trending videos

Back to Top