CONNECT WITH US  

ಹಿಂದು ದೇವರಿಗೆ ಸರಪಳಿ ಹಾಕಿ ಬಂಧಿಸಿಟ್ಟರು!

ಮೈಸೂರು: ಮೈಸೂರಿನ ಗೋಕುಲಂ ಬಡಾವಣೆಯ 3ನೇ ಹಂತದ 10ನೇ ಮುಖ್ಯ ರಸ್ತೆಯ ನಿವಾಸಿ ರೇವ್‌ ಬೆಂಜಮಿನ್‌ ಎಂಬಾತ ತನ್ನ ಮನೆಯಲ್ಲಿ ಹಿಂದೂ ದೇವರುಗಳ ಭಗ್ನವಾದ ವಿಗ್ರಹಗಳನ್ನು ಕಬ್ಬಿಣದ ಸರಪಳಿಗಳಿಂದ ಬಂಧಿಸಿ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದಾನೆ.

ಪ್ರಶ್ನಿಸಿದ್ದಲ್ಲಿ ತನಗೆ ಹಿಂದೂ ದೇವರುಗಳ ವಿಗ್ರಹಗಳನ್ನು ಸಂಗ್ರಹಿಸುವ ಹವ್ಯಾಸವಿದೆ ಎಂದು ನೆಪವೊಡ್ಡುತ್ತಾನೆ ಎಂದು ಸ್ಥಳೀಯರೊಬ್ಬರು ಹತ್ತಿರದ ವಿವಿ ಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇಲ್ಲಿನ ತನ್ನ ಮನೆಯಲ್ಲಿ ಹಿಂದೂ ದೇವತೆಗಳಾದ ಲಕ್ಷ್ಮೀ, ಸರಸ್ವತಿ, ಈಶ್ವರ, ಶನೇಶ್ವರ, ವಿಷ್ಣು ಸೇರಿದಂತೆ 300ಕ್ಕೂ ಹೆಚ್ಚು ಹಿಂದು ದೇವರ ಪುರಾತನ ವಿಗ್ರಹಗಳನ್ನು ಸರಪಳಿಗಳಿಂದ ಬಂಧಿಸಿಡಲಾಗಿದೆ.

ಮನೆಯ ಚಪ್ಪಲಿ ಬಿಡುವ ಜಾಗ, ಟಾಯ್ಲೆಟ್‌, ಹೂದೋಟ, ಕಾಂಪೌಂಡ್‌ ಸೇರಿದಂತೆ ಇನ್ನಿತರ ಕಡೆ ಇಟ್ಟಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಇವನನ್ನು ಪ್ರಶ್ನಿಸಿದರೆ ತನಗೆ ಇವುಗಳನ್ನು ಸಂಗ್ರಹಿಸುವ ಹವ್ಯಾಸವಿದೆ. ಭಗ್ನಗೊಂಡ, ಅವುಗಳನ್ನು ಯಾರಾದರೂ ಕದ್ದುಕೊಂಡು ಹೋಗಬಹುದೆಂದು ಸರಪಳಿ ಹಾಕಿರುವುದಾಗಿ ಹೇಳುವ ಮೂಲಕ ಸಮರ್ಥಿಸಿಕೊಂಡರೆ ಇವನಿಗೆ ಈತನ ಪತ್ನಿ ರೀಟಾವಾಜ‚ ಸಹ ಇದಕ್ಕೆ ಸಾಥ್‌ ನೀಡಿದ್ದಾರೆ.

ಈ ರೀತಿ ಹಿಂದೂ ವಿಗ್ರಹಗಳನ್ನು ಶೇಖರಿಸಿ, ಅಪಮಾನ ಮಾಡದಂತೆ ಸುತ್ತಮುತ್ತಲಿನ ನಿವಾಸಿಗಳು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಇದನ್ನು ಬೆಂಜಮಿನ್‌ ಕೇರ್‌ ಮಾಡಲಿಲ್ಲವಂತೆ. ಇದರಿಂದ ಬೇಸರಗೊಂಡ ಇದೇ ಬಡಾವಣೆಯ ನಿವಾಸಿ ಚಿಕ್ಕ ನರಸೇಗೌಡ ಎಂಬುವವರು ಹಿಂದೂ ಭಾವನೆಗಳಿಗೆ ಧಕ್ಕೆ ತರುವಂತೆ ನಡೆದುಕೊಂಡಿರುವ ಈತನ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ವಿವಿ ಪುರಂ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ದೂರಿನನ್ವಯ ವಿವಿ ಪುರಂ ಠಾಣಾ ಇನ್ಸ್‌ಪೆಕ್ಸರ್‌ ಎ.ಸೂರ್ಯನಾರಾಯಣ್‌ ರಾವ್‌ ಅವರು ಐಪಿಸಿ ಸೆಕ್ಷನ್‌ 292(ಎ) ಅನ್ವಯ ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಂತರ ಆರೋಪಿ ಬೆಂಜಮಿನ್‌ನನ್ನು ವಶಕ್ಕೆ ಪಡೆದು ವಿಗ್ರಹಗಳನ್ನು ಅಕ್ರಮವಾಗಿ ಶೇಖರಿಟ್ಟ ಬಗೆಗೆ ಹಾಗೂ ವಿಗ್ರಹಗಳಿಗೆ ಅಪಮಾನ ಮಾಡಿದ್ದಾರೆಯೇ ಎಂಬುದರ ವಿಚಾರಣೆ ನಡೆಸುತ್ತಿದ್ದಾರೆ.

ಅಲ್ಲದೆ, ವಿಷಯ ತಿಳಿದ ಪ್ರಾಚ್ಯ ವಸ್ತು ಸಂಶೋಧನಾಲಯದ ಆಯುಕ್ತ ಡಾ.ಸಿ.ಜಿ.ಬೆಟೂÕರ್‌ ಮs… ಸ್ಥಳಕ್ಕೆ ಭೇಟಿ ನೀಡಿ ಪ್ರಾಚೀನ ವಿಗ್ರಹಗಳ ಬಗ್ಗೆ ಮಾಹಿತಿ ಪಡೆದು ವಶಕ್ಕೆ ಪಡೆದಿದ್ದಾರೆ ಎಂದು ವಿವಿ ಪುರಂ ಇನ್ಸ್‌ಪೆಕ್ಟರ್‌ ಎ.ಸೂರ್ಯನಾರಾಯಣ್‌ ತಿಳಿಸಿದ್ದಾರೆ.

ನಾವೆಲ್ಲಾ ಪೂಜಿಸುವ ದೇವರುಗಳನ್ನು ಬೆಂಜಮಿನ್‌ ಅವರ ಮನೆಯ ಬಾತ್‌ರೂಂನಲ್ಲಿ, ಚಪ್ಪಲಿ ಬಿಡುವ ಸ್ಥಳದಲ್ಲಿ ಇಟ್ಟು ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಹವ್ಯಾಸ ನೆಪವೊಡ್ಡುತ್ತಿದ್ದರು. ಆದ್ದರಿಂದ ಹಿಂದೂಗಳ ಭಾವನೆಗೆ ಉದ್ದೇಶಪೂರ್ವವಾಗಿ ಧಕ್ಕೆ ತಂದಿರುವ ಬೆಂಜಮಿನ್‌ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು.
-ಚಿಕ್ಕ ನರಸೇಗೌಡ, ದೂರುದಾರ

ಹಿಂದೂ ದೇವರ ವಿಗ್ರಹಗಳನ್ನಿಡುವುದು ತನ್ನ ಹವ್ಯಾಸ. ಅದಕ್ಕಾಗಿಯೇ ಈ ರೀತಿ ಇಟ್ಟಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ. ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ತಪ್ಪಿತಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ.
-ಸೂರ್ಯನಾರಾಯಣ್‌ ರಾವ್‌, ವಿವಿ ಪುರಂ ಇನ್ಸ್‌ಪೆಕ್ಟ್ರ್‌.

Trending videos

Back to Top