CONNECT WITH US  

ಪೊರಕೆ ಹಿಡಿದು ನಗರದ ಚರಂಡಿ ಸ್ವತ್ಛತೆಗೆ ಮುಂದಾದ ಪೊಲೀಸರು

ಯಾದಗಿರಿ: ನಿತ್ಯ ಲಾಠಿ ಹಿಡಿದು ಕರ್ತವ್ಯ ನಿರ್ವಹಿಸುವ ಪೊಲೀಸರು ಸೋಮವಾರ ಬೆಳಗ್ಗೆ ಪೊರಕೆ ಹಿಡಿದು ಮುಖ್ಯ
ರಸ್ತೆಗಿಳಿದಿದ್ದು ಜನರಲ್ಲಿ ಅಚ್ಚರಿಗೊಳಿಸಿತು. ಯಾದಗಿರಿ ನಗರದ ಮುಖ್ಯ ಬೀದಿಗಳಾದ ಸುಭಾಷ್‌ ವೃತ್ತ, ಚಿತ್ತಾಪೂರ ರಸ್ತೆ ಸೇರಿದಂತೆ ಹಲವೆಡೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಗನ್ಯಾಂಗ್‌ ಅವರು ಪೊಲೀಸ್‌ ಸಿಬ್ಬಂದಿಗಳೊಂದಿಗೆ ಚರಂಡಿ ಸ್ವತ್ಛಗೊಳಿಸಿದರು. ವೈದ್ಯರು ಹಾಗೂ ನಗರಸಭೆ ಪೌರಾಯುಕ್ತರು ಕೂಡ ಸ್ವತ್ಛತಾ ಕಾರ್ಯಕ್ಕೆ ಸಾಥ್‌ ನೀಡಿದರು.

ಈ ವೇಳೆ ಮಾತನಾಡಿದ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಗನ್ಯಾಂಗ್‌, ನಮ್ಮ ಜಿಲ್ಲೆ
ಇತರೆ ಜಿಲ್ಲೆಗಳಿಗೆ ಸ್ವತ್ಛತೆಗೆ ಮಾದರಿಯಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ವ್ಯಾಪಾರಸ್ಥರು
ತಪ್ಪದೇ ನಗರಸಭೆ ಗುಂಡಿಗಳಲ್ಲಿ ಕಸ ಹಾಕಿ ಸ್ವತ್ಛತೆ ಕಾಪಾಡಬೇಕು ಎಂದು ಹೇಳಿದರು.

ನಗರವನ್ನು ಸ್ವತ್ಛವಾಗಿಡಲು ಕಸ ಸಂಗ್ರಹಿಸಲು ನಿತ್ಯ ನಗರಸಭೆ ವಾಹನಗಳು ಬಡಾವಣೆಗಳಿಗೆ ತೆರಳುತ್ತಿದೆ. ಬಹುತೇಕರು ವಾಹನಗಳಲ್ಲಿ ಕಸ ಹಾಕುತ್ತಿಲ್ಲ. ಕಸ ಬೇರ್ಪಡಿಸಿ ಪ್ರತಿಯೊಬ್ಬರು ಕಡ್ಡಾಯವಾಗಿ ನಗರಸಭೆ
ವಾಹನಗಳಿಗೆ ಕಸ ಹಾಕಿ ನಗರ ಸ್ವತ್ಛತೆಗೆ ಮುಂದಾಗಬೇಕು.
 ಸಂಗಪ್ಪ ಉಪಾಸೆ,ನಗರಸಭೆ ಪೌರಾಯುಕ

Trending videos

Back to Top