CONNECT WITH US  

ಉ.ಕ.ಬಂದ್‌ಗೆ ಹೈಕ ಭಾಗದ ಬೆಂಬಲ ಇಲ್ಲ

ಸಾಂದರ್ಭಿಕ ಚಿತ್ರ..

ಕಲಬುರಗಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮುಂಬೈ ಕರ್ನಾಟಕದವರು ಆ.2ರಂದು ಕರೆ
ನೀಡಲಾಗಿರುವ ಬಂದ್‌ಗೆ ಹೈದ್ರಾಬಾದ್‌ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಬೆಂಬಲವಿಲ್ಲ ಎಂದು
ಒಕ್ಕೂಟದ ಫರತಾಬಾದ್‌, ನಂದಕುಮಾರ ನಾಗಭುಜಂಗೆ ತಿಳಿಸಿದ್ದಾರೆ. 

3 ದಶಕಗಳಿಂದ ನಮಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸುವಾಗ ಮುಂಬೈ ಕರ್ನಾಟಕದ ವರು ಏಲ್ಲಿಗೆ ಹೋಗಿದ್ದರು? ಈಗ ನಮ್ಮ ಹೈದ್ರಾಬಾದ್‌ ಕರ್ನಾಟಕ ಭಾಗ ನೆನಪಿಗೆ ಬರುತ್ತಿರುವುದೇಕೆ? ಹಲವು ದಶಕಗಳ ನಿರಂತರ ಹೋರಾಟ ಫಲವಾಗಿ ಎಚ್‌ಕೆಆರ್‌ ಡಿಬಿ, 371ನೇ ಜೆ ವಿಧಿ ಪಡೆಯಲಾಗಿದೆ. 

ಈಗ ಅದರ ಲಾಭ ಪಡೆಯುವಾಗ ಭಾವನಾತ್ಮಕ ವಿಷ ಬೀಜ ಬಿತ್ತಿ ವಿಶೇಷ ಸ್ಥಾನಮಾನದ ಫಲ ಕಬಳಿಸಲು ಯತ್ನಿಸುತ್ತಿದ್ದಾರೆ. ಈ ಧೋರಣೆ ಖಂಡಿಸಿ ಆ.2ರಂದು ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


Trending videos

Back to Top