CONNECT WITH US  

ಭಗವಾನ್‌ ವಿರುದ್ಧ ಬಜರಂಗದಳ ದೂರು

ಕೋಲಾರ: ರಾಮಾಯಣ ಹಾಗೂ ಮಹಾಭಾರತದ ಕುರಿತು ಹಿಂದೂಗಳ ಭಾವನೆಗಳಿಗೆ ಧಕ್ಕೆ ಬರುವಂತೆ ಮಾತನಾಡಿರುವ ಪ್ರೊ.ಕೆ.ಎಸ್‌.ಭಗವಾನ್‌ ವಿರುದ್ಧ ಬಜರಂಗದಳದ ಕೋಲಾರ ಜಿಲ್ಲಾ ಸಂಚಾಲಕ ಬಾಬು ದೂರು ನೀಡಿದ್ದಾರೆ. ಭಗವಾನ್‌ ಅವರು ಸಾರ್ವಜನಿಕವಾಗಿ ರಾಮನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಲ್ಲದೆ ರಾಮಾಯಣ ಹಾಗೂ ಭಗವದ್ಗೀತೆ ಅತ್ಯಾಚಾರ, ಕೊಲೆಗೆ ಪ್ರಚೋದಿಸುತ್ತದೆ ಎಂದು ಹೇಳಿಕೆ ನೀಡುವ ಮೂಲಕ ಹಿಂದೂಗಳ ಭಾವನಗೆ ಧಕ್ಕೆ ತಂದಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.


Trending videos

Back to Top