CONNECT WITH US  

ಬಚ್ಚಿಟ್ಟಿದ್ದ 6 ಬಾಂಗ್ಲಾ ಮಹಿಳೆಯರ ರಕ್ಷಣೆ

ಚಿತ್ರದುರ್ಗ: ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರ ಹಾಕಬೇಕೆಂಬ ಒತ್ತಾಯ ಹೆಚ್ಚುತ್ತಿರುವ ಬೆನ್ನಲ್ಲೇ ನಗರದ ಹೋಟೆಲ್‌ ಮತ್ತು ಲಾಡ್ಜ್ಗಳ ನೆಲಮಾಳಿಗೆಯಲ್ಲಿ ಸುರಂಗ ಕೊರೆದು ಬಚ್ಚಿಟ್ಟಿದ್ದ ಬಾಂಗ್ಲಾದೇಶದ ಆರು ಮಹಿಳೆಯರನ್ನು ಪೊಲೀಸರು ಗುರುವಾರ ಪತ್ತೆ ಮಾಡಿದ್ದಾರೆ.

ಹೋಟೆಲ್‌ ಮತ್ತು ಲಾಡ್ಜ್ಗಳ ನೆಲಮಾಳಿಗೆಯಲ್ಲಿ ಸುರಂಗ ಕೊರೆದು ಅದರಲ್ಲಿ ಮಹಿಳೆಯರನ್ನು ಬಚ್ಚಿಟ್ಟು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಆಧರಿಸಿ ರಾಷ್ಟ್ರೀಯ ಹೆದ್ದಾರಿ -4ರ ಹೋಟೆಲ್‌ಗ‌ಳ ಮೇಲೆ ದಾಳಿ ನಡೆಸಿದ ಪೊಲೀಸರು,ಬಾಂಗ್ಲಾದೇಶದ ಆರು ಮಹಿಳೆಯರನ್ನು ರಕ್ಷಿಸಿ ಒಂಭತ್ತು ಪುರುಷರನ್ನು ಬಂಧಿಸಿದ್ದಾರೆ.

ಚಿತ್ರದುರ್ಗದ ಅನಾಮಿಕ ಮಾಹಿತಿದಾರನೊಬ್ಬ ಮೈಸೂರಿನ ಒಡನಾಡಿ ಸಂಸ್ಥೆಗೆ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದ. ಒಡನಾಡಿ ಸಂಸ್ಥೆಯ ಸ್ಟಾನ್ಲಿ ಮತ್ತು ಪರಶುರಾಮ್‌ ಈ ವಿಷಯವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹೋಟೆಲ್‌ಗ‌ಳ ಮೇಲೆ ದಾಳಿ ನಡೆಸಿದರು.

Trending videos

Back to Top