CONNECT WITH US  

ಪ್ರತಿ ಹೋಬಳಿಯಲ್ಲಿ ಇಂಟರ್‌ನ್ಯಾಷನಲ್‌ ಶಾಲೆ : ಖಾಶೆಂಪುರ

ಬೀದರ: ದೆಹಲಿ ಸರ್ಕಾರದ ಮಾದರಿಯಂತೆ ರಾಜ್ಯದ ಪ್ರತಿಯೊಂದು ಹೋಬಳಿ ವಲಯದಲ್ಲಿ ಇಂಟರ್‌ ನ್ಯಾಷನಲ್‌ ಶಾಲೆ ಸ್ಥಾಪಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಕುರಿತು ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸಿರುವುದಾಗಿ ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದೆಹಲಿಯಲ್ಲಿ ಕೇಜ್ರಿವಾಲ್‌ ನೇತೃತ್ವದ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅಲ್ಲಿನ 560 ಶಾಲೆಗಳನ್ನು ಇಂಟರ್‌ ನ್ಯಾಷನಲ್‌ ದರ್ಜೆಗೇರಿಸಿದೆ. ಅಲ್ಲದೆ, ಆ ಶಾಲೆಗಳ ಶಿಕ್ಷಕರಿಗೆ ವಿದೇಶದಲ್ಲಿ ವಿಶೇಷ ತರಬೇತಿ ಕೊಡಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಇಂಟರ್‌ ನ್ಯಾಷನಲ್‌ ಶಾಲೆಗಳನ್ನಾಗಿಸುವ ಚಿಂತನೆ ನಡೆಯುತ್ತಿದೆ. ಸದ್ಯ ಬೀದರ ಜಿಲ್ಲೆಯ ಹೋಬಳಿ ಮಟ್ಟದ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಎಚ್‌ಕೆಆರ್‌ಡಿಬಿ ಯೋಜನೆ ಅಡಿ ಅನುದಾನ ಇದ್ದು, ಈ ಕುರಿತು ನಾವು ನೋಡಿಕೊಳ್ಳುತ್ತೇವೆ. ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡಿ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಉತ್ತಮ ಫಲಿತಾಂಶದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.


Trending videos

Back to Top