CONNECT WITH US  

'ಶರಣಾಗತಿಗೆ ನಾಲ್ವರು ನಕ್ಸಲರು ಸಿದ್ಧ '

ಬೀದರ್‌ : ಭೂಗತರಾಗಿರುವ ನಾಲ್ವರು ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರಲು ಸಿದ್ಧರಿದ್ದು, ಈಗಾಗಲೇ ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮಾಜಿ ನಕ್ಸಲ್‌ ಸಿರಿಮನೆ ನಾಗರಾಜ ಹೇಳಿದರು. ರವಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಶರಣಾಗತಿಗೆ ಬಯಸಿರುವ ನಾಲ್ವರು ನಕ್ಸಲರ ಪೈಕಿ ಇಬ್ಬರ ವಿರುದ್ಧ ಗಂಭೀರ ಸ್ವರೂಪದ ಪ್ರಕರಣಗಳಿವೆ. ಹೀಗಾಗಿ ಇವರು ಮುಖ್ಯವಾಹಿನಿಗೆ ಬರಲು ಕೆಲ ತೊಡಕುಗಳಿವೆ. 

ಆದರೆ, ಮುಖ್ಯವಾಹಿನಿಗೆ ಬರುವ ನಕ್ಸಲರಿಗಾಗಿ ರೂಪಿಸಲಾದ ಶರಣಾಗತಿ ಪ್ಯಾಕೇಜ್‌ನ ಕೆಲ ನೀತಿ ಹಾಗೂ ಷರತ್ತುಗಳಿಗೆ ರಾಜ್ಯ ಸರಕಾರ ಬದಲಾವಣೆ ತರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಹೆಜ್ಜೆಯನ್ನಿಟ್ಟರೆ ಇನ್ನೂ ಬಹಳಷ್ಟು ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ ಎಂದರು.

ತಾನು 10 ವರ್ಷ ಹಾಗೂ ನೂರ್‌ ಶ್ರೀಧರ್‌ 15 ವರ್ಷ ಭೂಗತರಾಗಿ ನೊಂದವರ ಪರ ಹೋರಾಡಿದ್ದು, 2014ರ ಡಿ. 8ರಂದು ಮುಖ್ಯವಾಹಿನಿಗೆ ಬಂದಿದ್ದೇವೆ. ಹೋರಾಟದಿಂದ ಬೇಸತ್ತೋ ಅಥವಾ ಸರಕಾರ ನೀಡುವ ಪ್ಯಾಕೇಜ್‌ಗೆ ಮರುಳಾಗಿಯೋ ಮುಖ್ಯವಾಹಿನಿಗೆ ಬಂದಿಲ್ಲ. ಯಾವುದೇ ಸೌಲಭ್ಯಗಳ ಬೇಡಿಕೆಯನ್ನು ಸಹ ಇಟ್ಟಿಲ್ಲ. ನಾವು ನಂಬಿರುವ ಸಿದ್ಧಾಂತದ ಹಾದಿಯಲ್ಲೇ ಪ್ರಜಾತಾಂತ್ರಿಕ ಚಳವಳಿಗೆ, ಶಸ್ತ್ರ ರಹಿತ ಹೋರಾಟಕ್ಕೆ ಅವಕಾಶವಿದೆೆ ಎಂದರು.

Trending videos

Back to Top