CONNECT WITH US  

ಇಂದಿನಿಂದ ಹಲವೆಡೆ ಪುರುಷರಿಗೆ ಸಂತಾನ ಹರಣ ಚಿಕಿತ್ಸೆ

ಬೆಂಗಳೂರು: ಸಂತಾನಶಕ್ತಿ ಹರಣ ಶಸ್ತ್ರ ಉಚಿಕಿತ್ಸೆಗಾಗಿ ಕೇವಲ ಮಹಿಳೆಯರೇ ಒಳಪಡುವುದನ್ನು ನಿಯಂತ್ರಿಸಿ ಪುರುಷರೂ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ನ.13ರಂದು ವಿಶ್ವ ಪುರುಷ ಸಂತಾನ ಶಕ್ತಿ ಹರಣ ಶಸ್ತ್ರಉಚಿಕಿತ್ಸಾ ದಿನವನ್ನು ಆಚರಿಸುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕೂಡ ನ.7ರಿಂದ ಪುರುಷ ಸಂತಾನ ಶಕ್ತಿ ಹರಣ ಶಸ್ತ್ರಉಚಿಕಿತ್ಸಾ ಸಪ್ತಾಹವನ್ನು ಆಚರಿಸಲಾಗುತ್ತಿದೆ.

ಸಪ್ತಾಹದ ಅಂಗವಾಗಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿರುವ ಆರೋಗ್ಯ ಇಲಾಖೆಯು ಹಾಸನ, ಮೈಸೂರು, ಮಂಡ್ಯ, ತುಮಕೂರು, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಗದಗ, ಚಿತ್ರದುರ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳ ಸೌಲಭ್ಯ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪುರುಷ ಸಂತಾನಶಕ್ತಿಹರಣ ಶಸ್ತ್ರಉಚಿಕಿತ್ಸಾ ಶಿಬಿರಗಳನ್ನು (ನೋ ಸ್ಕಾಲ್‌ಪೆಲ್‌ ವ್ಯಾಸೆಕ್ಟಮಿ) ಆಯೋಜಿಸಿದ್ದು, ಪ್ರತಿ ತಾಲೂಕಿಗೆ 15 ಸಾವಿರ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಪ್ರತಿ ಉಪ ಕೇಂದ್ರಕ್ಕೆ ಒಬ್ಬ ಪುರುಷನನ್ನು ಶಸ್ತ್ರಉಚಿಕಿತ್ಸೆಗಾಗಿ ಮನವೊಲಿಸಿ ಕಡ್ಡಾಯವಾಗಿ ಕರೆತರಲು ಸೂಚಿಸಿದೆ. ಈ ಬಗ್ಗೆ ನಿರ್ಲಕ್ಷÂತನ ಕಂಡುಬಂದರೆ ತಾಲೂಕು ಆರೋಗ್ಯಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಶಸ್ತ್ರ ಚಿಕಿತ್ಸೆ ಹೇಗೆ: ಪುರುಷರು ಶಸ್ತ್ರಉಚಿಕಿತ್ಸೆ ಮಾಡಿಸಿಕೊಳ್ಳಲು ಮುಂದೆ ಬಂದರೂ ಅದಕ್ಕೆ ಆತನ ಪತ್ನಿ ಮತ್ತು ಕುಟುಂಬ ಅದಕ್ಕೆ ಅವಕಾಶ ನೀಡುವುದಿಲ್ಲ. ಇದಕ್ಕೆ ಶಸ್ತ್ರ ಉಚಿಕಿತ್ಸೆಮಾಡಿಸಿಕೊಂಡರೆ ಬಲಹೀನರಾಗುತ್ತಾರೆ,  ಲೈಂಗಿಕ ಆಸಕ್ತಿ ಕುಂದುತ್ತದೆ ಎಂಬ ತಪ್ಪು ಅಭಿಪ್ರಾಯವಿರುವುದೇ ಕಾರಣ.

ಮಹಿಳೆಯರಿಗೆ ಹೊಟ್ಟೆ ಕೊಯ್ದು ಶಸ್ತ್ರಉಚಿಕಿತ್ಸೆ ಮಾಡಬೇಕಾಗುತ್ತದೆ. ಆದರೆ ಪುರುಷರ ಶಸ್ತ್ರಉಚಿಕಿತ್ಸೆ ವಿಧಾನದಲ್ಲಿ ಚರ್ಮವನ್ನು ಕೊಯ್ಯುವುದಿಲ್ಲ. ಹೊಲಿಕೆ ಹಾಕುವುದೂ ಇಲ್ಲ. ವೃಷಣದ ಮಧ್ಯಭಾಗಕ್ಕೆ ಅರಿವಳಿಕೆ ಚುಚ್ಚುಮದ್ದನ್ನು ನೀಡಲಾಗುತ್ತದೆ. ನಂತರ ಒಂದು ಸಣ್ಣ ರಂಧ್ರದ ಮೂಲಕ ವೃಷಣದಿಂದ ಬರುವ ನಾಳವನ್ನು ವಿಭಾಗಿಸಲಾಗುತ್ತದೆ. 

ಶಸ್ತ್ರಉಚಿಕಿತ್ಸೆಯಿಂದ ಆಗುವ ನೋವು, ರಕ್ತಸ್ರಾವ ಬಹಳ ಕಡಿಮೆ. ಲೈಂಗಿಕ ಶಕ್ತಿಗೆ ತೊಂದರೆ ಉಂಟಾಗುವುದಿಲ್ಲ. ದೈಹಿಕ ನಿಶ್ಶಕ್ತಿಯೂ ಉಂಟಾಗುವುದಿಲ್ಲ. ಪ್ರತಿ ವ್ಯಕ್ತಿಗೆ 15 ರಿಂದ 20 ನಿಮಿಷಗಳಲ್ಲಿ ಶಸ್ತ್ರಉಚಿಕಿತ್ಸೆ ಮುಗಿಯಲಿದ್ದು, ಕೂಡಲೇ ತೆರಳಬಹುದು. ಆದರೆ, ಶಸ್ತ್ರಉಚಿಕಿತ್ಸೆಗೆ ಒಳಗಾದ ಕೆಲವರಿಗೆ ರಕ್ತಸ್ರಾವ ಆಗುವ ಸಾಧ್ಯತೆ ಇರುವುದರಿಂದ 1 ರಿಂದ 2 ಗಂಟೆಗಳ ಕಾಲ ವೈದ್ಯರ ನಿಗಾದಲ್ಲಿರಿಸಿ ನಂತರ ಕಳುಹಿಸಲಾಗುವುದು. ಶಸ್ತ್ರಉಚಿಕಿತ್ಸೆಯಾದ ಬಳಿಕ ಆಸ್ಪತ್ರೆಯಲ್ಲಿರುವ ಅವಶ್ಯಕತೆಯಿಲ್ಲ.

ಪ್ರೋತ್ಸಾಹಧನಕ್ಕಾಗಿ ಮಕ್ಕಳಾಗೋ
ಮುನ್ನವೇ ಬಲವಂತದ ಶಸ್ತ್ರಉಚಿಕಿತ್ಸೆ!

ಗುರಿ ಮುಟ್ಟುವ ತರಾತುರಿಯೋ ಅಥವಾ ಪ್ರೋತ್ಸಾಹಧನದ ಆಸೆಗಾಗಿಯೋ ಆಸ್ಪತ್ರೆಗೆ ಬಂದ ವ್ಯಕ್ತಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಿದ ಪ್ರಕರಣ ತುಮಕೂರು ಜಿಲ್ಲೆಯ ಶಿರಾ
ತಾಲೂಕಿನ ಪಟ್ಟನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಪಾವಗಡ ಮೂಲದ ಸುರೇಶ್‌ ಸದ್ಯ ತೊಗರಗುಂಟೆಯಲ್ಲಿ ನೆಲಸಿದ್ದು, ಒಂದೂವರೆ ವರ್ಷಗಳ ಹಿಂದೆ
ವಿವಾಹವಾಗಿದ್ದರು. ಇವರಿಗೆ ಇನ್ನೂ ಮಕ್ಕಳಾಗಿಲ್ಲ. ಸುರೇಶ್‌ ಅನಾರೋಗ್ಯದ ನಿಮಿತ್ತ ಚಿಕಿತ್ಸೆಗಾಗಿ ತೆಪಟ್ಟನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿ ಸುರೇಶ್‌ನನ್ನು ಪುಸಲಾಯಿಸಿ ಪತ್ರವೊಂದಕ್ಕೆ ಹೆಬ್ಬೆರಳ ಸಹಿ ಹಾಕಿಸಿಕೊಂಡು ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿ ಕೆಲವು ಔಷಧಿಗಳನ್ನು ನೀಡಿ ಮನೆಗೆ ಕಳುಹಿಸಿದ್ದಾರೆ.

ಶಸ್ತ್ರಉಚಿಕಿತ್ಸೆ ನಡೆದ ಬಗ್ಗೆ ಅನುಮಾನಗೊಂಡ ಸುರೇಶ್‌ನ ಪತ್ನಿ ಈ ಬಗ್ಗೆ ಗ್ರಾಮದ ಕೆಲವರಲ್ಲಿ ವಿಚಾರಿಸಿದ್ದಾರೆ. ನಂತರ ಆಸ್ಪತ್ರೆಯಲ್ಲಿ ನೀಡಿದ್ದ ಚೀಟಿಯನ್ನು ನೋಡಿದಾಗ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಲಾಗಿರುವುದು ಬಯಲಾಗಿದೆ.

Trending videos

Back to Top