CONNECT WITH US  

​ಖ್ಯಾತ ಶಿಲ್ಪಿ ಪರಮೇಶ್ವರಾಚಾರ್‌ ನಿಧನ

ಬೆಂಗಳೂರು:ವಿಧಾನಸೌಧ ನಿರ್ಮಾಣ ಸಂದರ್ಭದಲ್ಲಿ ಮುಖ್ಯ ವಿನ್ಯಾಸಕಾರರಾಗಿದ್ದ ಖ್ಯಾತ ಶಿಲ್ಪಿ ಸಿ.ಪರಮೇಶ್ವರ ಆಚಾರ್ಯ ಶನಿವಾರ ಸಂಜೆ ನಗರದಲ್ಲಿ ನಿಧನರಾದರು. ಜಯನಗರ 9 ನೇ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದ ಪರಮೇಶ್ವರ ಆಚಾರ್ಯ ಅವರಿಗೆ 89 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಚಾಮರಾಜಪೇಟೆ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೂಲತಃ ಮೈಸೂರಿನವರಾದ ಪರಮೇಶ್ವರ ಆಚಾರ್ಯ ಜ್ಯೋತಿಷಿ ಮಿರ್ಲೆ ಚೌಡಾಚಾರ್‌ ಅವರ ಪುತ್ರರು. ಮೈಸೂರು ಅರಸರ ಸಂಸ್ಥಾನದಲ್ಲಿ ಅಸ್ಥಾನ ಶಿಲ್ಪಿಯಾಗಿದ್ದ ಸಿದ್ಧಲಿಂಗಸ್ವಾಮಿಯವರ ಶಿಷ್ಯರಾಗಿದ್ದರು. ವಿಧಾನಸೌಧ ನಿರ್ಮಾಣ ಸಂದರ್ಭದಲ್ಲಿ ಮುಖ್ಯ ವಿನ್ಯಾಸಕರಾಗಿ ಇವರನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗಿತ್ತು. ವಿಧಾನಸಭೆ, ವಿಧಾನಪರಿಷತ್‌ ಸಭಾಂಗಣದ ಒಳಾಂಗಣ ವಿನ್ಯಾಸ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Trending videos

Back to Top