CONNECT WITH US  

ಬಿಜಿಎಸ್‌ನಲ್ಲಿ ಚಿಕಿತ್ಸೆ ಪಡೆದು ಮರಳಿದ ಸಿದ್ಧಗಂಗಾ ಶ್ರೀ

ಬೆಂಗಳೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ನಗರದ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ರಾತ್ರಿ ಮಠಕ್ಕೆ ಹಿಂದಿರುಗಿದ್ದಾರೆ.

ಶ್ರೀಗಳ ಪಿತ್ತನಾಳದಲ್ಲಿ ಬ್ಲಾಕ್‌ ಆಗಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕೆಂಗೇರಿ ಬಳಿಯ ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀಗಳನ್ನು ಪರೀಕ್ಷಿಸಿದ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಾಜಿಸ್ಟ್‌ ಡಾ.ರವೀಂದ್ರ ನೇತೃತ್ವದ ತಂಡವೂ ಎಂಡೋಸ್ಕೋಪಿ ಮಾಡಿ ಪಿತ್ತನಾಳದಲ್ಲಿನ ಬ್ಲಾಕ್‌ ಅನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದರು. ಚಿಕಿತ್ಸೆ ನಂತರದಲ್ಲಿ ಅವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಶ್ರೀಗಳು ಚೇತರಿಸಿಕೊಂಡಿದ್ದರಿಂದ ರಾತ್ರಿ ಆಸ್ಪತ್ರೆಯಿಂದ ಮಠಕ್ಕೆ ತೆರಳಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಡಾ.ರವೀಂದ್ರ, ಸಾಮಾನ್ಯವಾಗಿ ಒಬ್ಬರಿಗೆ ಆರು ಸ್ಟಂಟ್‌ಗಳನ್ನು ಮಾತ್ರ ಅಳವಡಿಸಲು ಸಾಧ್ಯ. ಆದರೆ, ಶ್ರೀಗಳಿಗೆ ಈಗಾಗಲೇ ಎಂಟು ಸ್ಟಂಟ್‌ ಅಳವಡಿಸಲಾಗಿದೆ. ಜತೆಗೆ ಒಂದು ಸ್ಟಂಟ್‌ನ ಕಾರ್ಯನಿರ್ವಹಣಾ ಅವಧಿ ಆರು ತಿಂಗಳು. ಶ್ರೀಗಳಿಗೆ ಅಳವಡಿಸಿದ್ದ 8ನೇ ಸ್ಟಂಟ್‌ ಆರು ತಿಂಗಳಾಗಿದ್ದರಿಂದ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ವೈದ್ಯರ ತಂಡವು ಶ್ರೀಗಳಿಗೆ ರಕ್ತ ಪರೀಕ್ಷೆ, ಎಕ್ಸ್‌ ರೇ, ಇಸಿಜಿ, ಅಲಾø ಸೌಂಡ್‌ ಸ್ಕ್ಯಾನ್‌ ಪರೀಕ್ಷೆ ನಡೆಸಿ, ಎಂಡೋಸ್ಕೋಪಿ ಚಿಕಿತ್ಸೆ ನಡೆಸಿದ್ದಾರೆ.

Trending videos

Back to Top