CONNECT WITH US  

ಅಜಾತ ಶತ್ರು ಅಮರ : ರಾಜ್ಯದಲ್ಲಿ ನಾಳೆ ಸರಕಾರಿ ರಜೆ ಘೋಷಣೆ

ಬೆಂಗಳೂರು: ಮಾಜೀ ಪ್ರಧಾನಿ ಹಾಗೂ ಭಾರತೀಯ ಜನತಾ ಪಕ್ಷದ ನೇತಾರ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಪ್ರಯುಕ್ತ ನಾಳೆ ರಾಜ್ಯಾದ್ಯಂತ ಸರಕಾರಿ ರಜೆಯನ್ನು ಘೋಷಿಸಲಾಗಿದೆಇನ್ನು ಕೇಂದ್ರ ಸರಕಾರದ ಇಲಾಖಾ ಕಛೇರಿಗಳಿಗೆ ನಾಳೆ ಅರ್ಧ ದಿನ ರಜೆ ಘೋಷಿಸಲಾಗಿದೆ.

ಇದಕ್ಕೂ ಮುಂಚೆ ರಾಜ್ಯದಲ್ಲಿ ಕೇವಲ ಶೋಕಾಚರಣೆ ನಡೆಸಲು ಮಾತ್ರವೇ ನಿರ್ಧರಿಸಲಾಗಿತ್ತು ಆದರೆ ಬಳಿಕ ತನ್ನ ನಿರ್ಧಾರವನ್ನು ಪರಿಷ್ಕರಿಸಿದ ರಾಜ್ಯ ಸರಕಾರವು ಶುಕ್ರವಾರದಂದು ರಾಜ್ಯದ ಎಲ್ಲಾ ಶಾಲಾ – ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಆದೇಶವನ್ನು ಹೊರಡಿಸಿ​​​​​​​ದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆದೇಶದಂತೆ ಈ ಆದೇಶವನ್ನು ಹೊರಡಿಸಲಾಗಿದೆ ಎಂಬ ಮಾಹಿತಿಯನ್ನು ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸರಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸುವಂತೆಯೂ ಸಹ ರಾಜ್ಯ ಸರಕಾರ ಆದೇಶವನ್ನು ಹೊರಡಿಸಲಾಗಿದೆ.

Trending videos

Back to Top