CONNECT WITH US  

ಅವರ ಕಾಲದಲ್ಲಿ ಸಿಎಂ ಆಗಿದ್ದೇ ಹೆಮ್ಮೆ

ಅಟಲ್‌ ಬಿಹಾರಿ ವಾಜಪೇಯಿ ಅವರು ಈ ದೇಶದ ಪರಿಪಕ್ವ ಪ್ರಧಾನಿಯಾಗಿದ್ದರು. ಒಕ್ಕೂಟ ವ್ಯವಸ್ತೆಯನ್ನು ಹೇಗೆ ಕಾಪಾಡಿಕೊಂಡು ಹೋಗಬೇಕು ಎಂಬುದಕ್ಕೆ ಅವರು ಮೇಲ್ಪಂಕ್ತಿಯಾಗಿದ್ದರು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನಾನು ಮುಖ್ಯಮಂತ್ರಿಯಾಗಿದ್ದೆ ಎಂಬುದೇ ನನ್ನ ಹೆಮ್ಮೆ. ರಾಜ್ಯದ ವಿಚಾರಗಳಿಗೆ ಸಂಬಂಧಿಸಿದಂತೆ ಅವರ ಸ್ಪಂದನೆ ಮರೆಯುವಂತಿಲ್ಲ. ಅವರ ರಾಷ್ಟ್ರ ಸಮರ್ಪಿತ ಜೀವನ ದೇಶದ ಎಲ್ಲ ರಾಜಕಾರಣಿಗಳಿಗೂ ಮಾದರಿ. ವಾಜಪೇಯಿ ಅವರು ವಿಶ್ವಮಾನ್ಯ ಪಡೆದವರು. ಅವರ ನಡೆ, ನುಡಿ, ಸರಳತೆ, ದಕ್ಷತೆ, ಪ್ರಾಮಾಣಿಕತೆ ದೇಶದ ಎಲ್ಲ ರಾಜಕಾರಣಿಗಳಿಗೂ ಅನುಕರಣೀಯ.

-- ಎಸ್‌.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

Trending videos

Back to Top