CONNECT WITH US  

ನಿತ್ಯಾನಂದ ಸ್ವಾಮಿಗೆ ಜಾಮೀನು ರಹಿತ ವಾರೆಂಟ್‌

ರಾಮನಗರ: ವಿಚಾರಣೆಗಳಿಗೆ ಸತತ ಗೈರಾಗುತ್ತಿರುವ ಹಿನ್ನೆಲೆಯಲ್ಲಿ ನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ
ನ್ಯಾಯಾಲಯ ಬಿಡದಿಯ ನಿತ್ಯಾನಂದ ಸ್ವಾಮೀಜಿ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಿದೆ. 

ಬಿಡದಿಯ ನಿತ್ಯಾನಂದ ಮತ್ತು ಅವರ ಅನುಯಾಯಿಗಳು ಸೇರಿ 6 ಮಂದಿ ವಿರುದಟಛಿ ಆರೋಪಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ 2018ರ ಜೂನ್‌ನಿಂದ ಇಲ್ಲಿಯವರೆಗೆ ಪ್ರಮುಖ ಆರೋಪಿ ನಿತ್ಯಾನಂದ ಸ್ವಾಮಿ ಗೈರಾಗುತ್ತಿದ್ದರು. ಚಾತುರ್ಮಾಸ ಪರಿಕ್ರಮದ ಆಚರಣೆಯಲ್ಲಿರುವುದರಿಂದ ವಿಚಾರಣೆಗೆ
ಆಗಮಿಸಲಾಗುತ್ತಿಲ್ಲ ಎಂದು ಸ್ವಾಮೀಜಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.

ಆದರೆ ಗುರುವಾರ ಮತ್ತೆ ನಿತ್ಯಾನಂದ ಸ್ವಾಮೀಜಿ ಗೈರಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಜಾಮೀನು ರಹಿತ ವಾರೆಂಟ್‌ ಹೊರಡಿಸಿದೆ.


Trending videos

Back to Top