CONNECT WITH US  

ಪಕ್ಷ ವಿರೋಧಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಖಂಡ್ರೆ

ಶಿವಮೊಗ್ಗ: ಪಕ್ಷವನ್ನು ಬೇರುಮಟ್ಟದಲ್ಲಿ ಬಲಗೊಳಿಸುವಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚಿಸಿದ್ದಾರೆ. ಯಾರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ. ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ರಾಜ್ಯದೆಲ್ಲೆಡೆ ನಡೆದಿದೆ. ಕರ್ನಾಟಕ ದೇಶದಲ್ಲಿಯೇ ಮುಂಚೂಣಿ ರಾಜ್ಯವಾಗಿ ಪ್ರಗತಿ ಹೊಂದಿದ್ದರೆ. ಅದರ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲಬೇಕು ಎಂದರು.

ಕೇಂದ್ರ ನಿರ್ಲಕ್ಷ್ಯ: ಪ್ರಕೃತಿ ವಿಕೋಪದಿಂದ ಸಾಕಷ್ಟು ಹಾನಿಗೀಡಾಗಿರುವ ಕೊಡಗಿಗೆ ತಾತ್ಕಾಲಿಕ ಪರಿಹಾರವಾಗಿ ಕೇಂದ್ರ ಸರಕಾರ ತಕ್ಷಣವೇ 100 ಕೋಟಿ ರೂ.ಅನುದಾನ ಬಿಡುಗಡೆ ಮಾಡಬೇಕಿತ್ತು. ಆದರೆ, ಕೇವಲ 7 ಕೋಟಿ ನೀಡಿದೆ. ಇಡೀ ಕೊಡಗಿನ ಜನತೆ ಸಂಕಷ್ಟದಲ್ಲಿ ಸಿಲುಕಿರುವ ಸನ್ನಿವೇಶದಲ್ಲಿಯೂ ಕೇಂದ್ರ ಸರಕಾರ ಅನುದಾನ ನೀಡಲು ಮೀನಾಮೇಷ ಎಣಿಸುತ್ತಿದೆ. ಈಗಾಗಲೇ ನೀಡುವ ಬಿಡುಗಾಸಿನ ಅನುದಾನ ಯಾವುದಕ್ಕೂ ಸಾಕಾಗುವುದಿಲ್ಲ. ತುರ್ತಾಗಿ ಕನಿಷ್ಠ 100 ಕೋಟಿ ರೂ.ಪರಿಹಾರ ಹಣ ಘೋಷಣೆ ಮಾಡುವ ಮೂಲಕ ಕೊಡಗಿನ ಜನರ ಬದುಕು ನಿರ್ಮಾಣಕ್ಕೆ ಆಸರೆಯಾಗಬೇಕು ಎಂದು ಒತ್ತಾಯಿಸಿದರು. ಕೊಡಗು ಪರಿಹಾರಕ್ಕಾಗಿ ಕಾಂಗ್ರೆಸ್‌ನ ಜನಪ್ರತಿನಿಗಳು ಮತ್ತು ರಾಜ್ಯಸಭಾ ಸದಸ್ಯರು ಸೇರಿ 10 ಕೋಟಿ ರೂ. ನೀಡಲು ಮುಂದಾಗಿದ್ದೇವೆ ಎಂದರು.


Trending videos

Back to Top