CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಶ್ರೀರಾಮ ತಂದೆಗೆ ಹುಟ್ಟಿದ ಮಗನಲ್ಲ, ಮಹಾಭಾರತ ಓದ್ಬೇಡಿ; ಭಗವಾನ್

ಬೆಂಗಳೂರು: ಭಗವಾನ್ ಎಂದು ಪೂಜಿಸುವ ಶ್ರೀರಾಮ ತಂದೆಗೆ ಹುಟ್ಟಿದ ಮಗನಲ್ಲ, ಅಶ್ವಯಾಗದಿಂದ ಹುಟ್ಟಿದಾತ ಶ್ರೀರಾಮ. ಮೊದಲು ಶ್ರೀಕೃಷ್ಣ ಮತ್ತು ಶ್ರೀರಾಮನ ದೇವಸ್ಥಾನಕ್ಕೆ ಹೋಗೋದನ್ನು ಬಿಡಿ...ಎಂದು ಪ್ರೊ.ಕೆ.ಎಸ್ ಭಗವಾನ್ ಹೇಳುವ ಮೂಲಕ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ದ್ರಾವಿಡ ಸಂಸ್ಕೃತಿ ಚಿಂತಕ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಜನ್ಮದಿನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ಈ ವಿವಾದಿತ ಹೇಳಿಕೆ ನೀಡಿದ್ದಾರೆ.

ಮಹಾಭಾರತದಿಂದ ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿದೆ. ಕುಂತಿ ಮಕ್ಕಳನ್ನು ಹೆತ್ತಿದ್ದು ಕೂಡಾ ವ್ಯಭಿಚಾರದಿಂದ. ಮಹಾಭಾರತ ವ್ಯಭಿಚಾರದ ಪುಸ್ತಕ. ಗೋಡ್ಸೆ ಕೂಡಾ ಮಹಾಭಾರತವನ್ನು ಓದಿಯೇ ಮಹಾತ್ಮ ಗಾಂಧಿಯನ್ನು ಹತ್ಯೆಗೈದಿದ್ದ. ಭಗವದ್ಗೀತೆ ಕೊಲೆ ಮಾಡುವಂತೆ ಪ್ರೇರೇಪಿಸುತ್ತದೆ ಎಂದು ಪೆರಿಯಾರ್ ಚಿಂತಕಿ ಕಲೈ ಸೆಲ್ವಿ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೇ ಸಭೆಯಲ್ಲಿ ಹಾಜರಿದ್ದ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಮಹಾಭಾರತ ಓದಿ ಯಾರೂ ಒಳ್ಳೆಯ ವ್ಯಕ್ತಿಗಳಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಹಿಂದೂ ಧರ್ಮ ಅವಹೇಳನಕ್ಕೆ ಮುತಾಲಿಕ್ ಆಕ್ರೋಶ:
ಈ ವಿಚಾರವಾದಿಗಳು ಹೀಗೆ ಬಹಿರಂಗವಾಗಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದು, ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

Back to Top