CONNECT WITH US  

ಸಿಎಂ ರುಂಡ ಚೆಂಡಾಡುತ್ತೇನೆ; ಬಿಜೆಪಿ ನಾಯಕ ಚನ್ನಬಸಪ್ಪ ಪೊಲೀಸ್ ವಶಕ್ಕೆ

ಶಿವಮೊಗ್ಗ: ಗೋಮಾಂಸ ಸೇವಿಸುವ ಮಾತನ್ನು ಮುಖ್ಯಮಂತ್ರಿಗಳು ಶಿವಮೊಗ್ಗಕ್ಕೆ ಬಂದು ಹೇಳಲಿ, 
ಅವರ ರುಂಡ ಚೆಂಡಾಡುತ್ತೇವೆ..! ಹೀಗೆಂದು ಅಬ್ಬರಿಸಿದವರು ಬಿಜೆಪಿ ನಾಯಕ ಹಾಗೂ ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷ ಚೆನ್ನಬಸಪ್ಪ ಅವರು. ಈ ಹೇಳಿಕೆ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಏತನ್ಮಧ್ಯೆ ಸಿಎಂ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಚನ್ನಬಸಪ್ಪನನ್ನು ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೋಮಾಂಸ ಸೇವನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಿದ ಮಾತನ್ನು ಖಂಡಿಸಿ ಬಿಜೆಪಿ ವತಿಯಿಂದ ಇಲ್ಲಿನ ಗೋಪಿ ವೃತ್ತದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಚೆನ್ನಬಸಪ್ಪ ಅವರು ಮುಖ್ಯಮಂತ್ರಿ
ಸಿದ್ಧರಾಮಯ್ಯನವರು ಎಲ್ಲೋ ಏನೋ ಮಾತನಾಡುತ್ತಾರೆ. ಅತ್ಯಂತ ಪವಿತ್ರವಾದ ಗೋ ಕುರಿತು ಈ ರೀತಿ ಮಾತನಾಡುತ್ತಿದ್ದಾರೆ.

ಗೋಮಾ ಮಾತೆಗೆ ಕುತ್ತಿಗೆಗೆ ಕೈ ಹಾಕುತ್ತೀರಾ? ಗೋಮಾಂಸ ತಿನ್ನುವ ಕುರಿತು ರಾಜಾರೋಷವಾಗಿ ಸರ್ವಾಧಿಕಾರ ಧೋರಣೆಯಿಂದ ಮಾತನಾಡುತ್ತೀರಾ? ತಾಕತ್ತಿದ್ದರೆ, ಶಿವಮೊಗ್ಗದ ಗೋಪಿ ವೃತ್ತಕ್ಕೆ ಬಂದು ಈ ಮಾತನ್ನು ಹೇಳಲಿ, ನಿಮ್ಮ ರುಂಡವನ್ನು ಚೆಂಡಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.. ಇದೀಗ ಈ ಮಾತು ತೀವ್ರ ವಿವಾದಕ್ಕೆ ಒಳಗಾಗಿದೆ. ಚನ್ನಬಸಪ್ಪ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Trending videos

Back to Top