CONNECT WITH US  

ಮನವೊಲಿಕೆ ಯಶಸ್ವಿ: ಜಾರಕಿ ಪ್ರಹಸನ ಕಡೆಗೂ ಅಂತ್ಯ

ಬೆಂಗಳೂರು: ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ ರಾಜೀನಾಮೆ ಪ್ರಹಸನ ಶುಕ್ರವಾರ ತಡರಾತ್ರಿ ನಿರೀಕ್ಷೆ ಯಂತೆ ಸುಖಾಂತ್ಯವಾಗಿದೆ.

ತನ್ನ ಆಹ್ವಾನ ಮನ್ನಿಸಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಸತೀಶ್‌ ಜಾರಕಿಹೊಳಿ ಅವರನ್ನು ಲೋಕೋಪ ಯೋಗಿ ಸಚಿವ ಮಹದೇವಪ್ಪ ಅವರ ನಿವಾಸದಲ್ಲಿ ಭೇಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಿದರು. ಈ ಸಂದರ್ಭ ಸತೀಶ್‌ ಅವರ ಮನ ವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿ ಯಾಗಿದ್ದಾರೆ. ರಾಜೀನಾಮೆ ವಾಪಸ್‌ ಪಡೆದು ಸಂಪುಟದಲ್ಲಿ ಮುಂದು ವರಿಯು ವುದಾಗಿ ಸಿಎಂ ಜತೆಗಿನ ಮಾತುಕತೆ ಬಳಿಕ ಸ್ವತಃ ಜಾರಕಿಹೊಳಿ ತಿಳಿಸಿದ್ದಾರೆ.

ಜಾರಕಿಹೊಳಿ ನಿರ್ಧಾರಕ್ಕೆ ಪ್ರತಿ ಯಾಗಿ ಅವರಿಗೆ ತತ್‌ಕ್ಷಣಕ್ಕೆ ಅಂದರೆ, ವಿಧಾನಮಂಡಲ ಅಧಿವೇಶನದ ಅನಂತರ (ಬಹುತೇಕ ಫೆ. 14ರ ವೇಳೆಗೆ ) ಅಬಕಾರಿ ಖಾತೆ ಜತೆಗೆ ಹೆಚ್ಚುವರಿ ಖಾತೆಯೊಂದು (ಸಣ್ಣ ಕೈಗಾರಿಕೆ ?) ದೊರೆಯಲಿದೆ. ಸನಿಹ ಭವಿಷ್ಯದಲ್ಲಿ ಅರ್ಥಾತ್‌ ಸಂಪುಟ ವಿಸ್ತರಣೆ ವೇಳೆ ಅಬಕಾರಿ ಖಾತೆ ಬದಲು ಜನ ಸಂಪರ್ಕವಿರುವ ಪ್ರಮುಖ ಖಾತೆ ಯೊಂದು ಲಭ್ಯವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇದಿಷ್ಟೇ ಅಲ್ಲದೆ, ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಯಾವುದೇ ವಿಚಾರ ದಲ್ಲಿ ಸತೀಶ್‌ ಜಾರಕಿಹೊಳಿ ಜತೆ ಸಮಾ ಲೋಚನೆ ನಡೆಸಿದ ಅನಂತರವೇ ಸರಕಾರ ನಿರ್ಧಾರಗಳನ್ನು ಕೈಗೊಳ್ಳಲಿದೆ. ಪೊಲೀಸ್‌ ಸೇರಿದಂತೆ ಯಾವುದೇ ಇಲಾಖೆಯ ವರ್ಗಾವಣೆಯೂ ಜಾರಕಿಹೊಳಿ ಅವರ ಒಪ್ಪಿಗೆ ಅನಂತರವೇ ನಡೆಯಲಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಮುಂದೆ ಸತೀಶ್‌ ಜಾರಕಿಹೊಳಿ ಅವರನ್ನು ಉಪೇಕ್ಷೆ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತನ್ಮೂಲಕ ಕಳೆದ ಮೂರು ದಿನ ಗಳಿಂದ ನಡೆದಿದ್ದ ಸತೀಶ್‌ ಜಾರಕಿ ಹೊಳಿ ರಾಜೀನಾಮೆ ಹಾಗೂ ಅವರನ್ನು ಮನವೊಲಿಸುವ ಪ್ರಹಸನ ಅಂತ್ಯಗೊಂಡಂತೆ ಆಗಿದೆ.

Trending videos

Back to Top