CONNECT WITH US  

ಬೆಂಗಳೂರು ಕಾರವಾರ ಎಕ್ಸ್‌ಪ್ರೆಸ್‌ ಮಾರ್ಗ ಬದಲಾವಣೆ

ಹುಬ್ಬಳ್ಳಿ: ನೈಋತ್ಯ ರೈಲ್ವೆಯು ಆ.31ರವರೆಗೆ ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಿದೆ. ಬೆಂಗಳೂರು ನಗರ-ಕಣ್ಣೂರ/ಕಾರವಾರ ಎಕ್ಸ್‌ಪ್ರೆಸ್‌ (16511/16513) ರೈಲು ತಿರುಪತ್ತೂರ ಜಂಕ್ಷನ್‌, ಸೇಲಂ, ಎರೋಡ, ಪಾಲಕ್ಕಾಡ, ಶೊರನೂರ ಜಂಕ್ಷನ್‌ ಮಾರ್ಗವಾಗಿ ಸಂಚರಿಸಲಿದೆ. ಕಣ್ಣೂರ/ ಕಾರವಾರ-ಬೆಂಗಳೂರು ನಗರ ಎಕ್ಸ್‌ಪ್ರೆಸ್‌ (16512/16514) ರೈಲು ಶೋರನೂರ ಜಂಕ್ಷನ್‌, ಪಾಲಕ್ಕಾಡ, ಎರೋಡ, ಸೇಲಂ, ತಿರುಪತ್ತೂರ ಜಂಕ್ಷನ್‌ ಮಾರ್ಗವಾಗಿ ಸಾಗಲಿದೆ.

ಬೆಂಗಳೂರು ನಗರ-ಕಣ್ಣೂರ/ಕಾರವಾರ ಎಕ್ಸ್‌ಪ್ರೆಸ್‌ (16517/16523) ರೈಲು ತಿರುಪತ್ತೂರ ಜಂಕ್ಷನ್‌, ಸೇಲಂ, ಎರೋಡ, ಪಾಲಕ್ಕಾಡ, ಶೋರನೂರ ಜಂಕ್ಷನ್‌ ಮಾರ್ಗವಾಗಿ ಪ್ರಯಾಣಿಸಲಿದೆ. ಅದೇ ರೀತಿ ಕಣ್ಣೂರ/ಕಾರವಾರ-ಬೆಂಗಳೂರು ನಗರ ಎಕ್ಸ್‌ಪ್ರೆಸ್‌ (16518/16524) ರೈಲು ಶೋರನೂರ ಜಂಕ್ಷನ್‌, ಪಾಲಕ್ಕಾಡ್‌, ಎರೋಡ, ಸೇಲಂ, ತಿರುಪತ್ತೂರ ಜಂಕ್ಷನ್‌ ಮಾರ್ಗವಾಗಿ ಚಲಿಸಲಿದೆ.

ಕಣ್ಣೂರ/ಕಾರವಾರದಿಂದ ಆ.28ರಂದು ಹೊರಡುವ ಕಣ್ಣೂರ/ಕಾರವಾರ-ಬೆಂಗಳೂರು ನಗರ ಎಕ್ಸ್‌ಪ್ರೆಸ್‌ (16512/16514) ರೈಲು ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Trending videos

Back to Top