CONNECT WITH US  

ಸಿದ್ದರಾಮಯ್ಯ ಎಚ್‌ಡಿಕೆ ಇಳಿಸಿ ಸಿಎಂ ಆಗ್ತೀನಿ ಅಂದಿಲ್ಲ : ಸಚಿವ ಜಮೀರ್

ಹುಬ್ಬಳ್ಳಿ: ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಮುಖ್ಯಮಂತ್ರಿ ಅಗುತ್ತೇನೆ ಅಂದಿಲ್ಲ. ಮಾಧ್ಯಮಗಳ ವರದಿ ಗೊಂದಲಕ್ಕೆ ಕಾರಣವಾಗಿದೆ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿಕೆ ನೀಡಿದ್ದಾರೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್‌ ಕುಮಾರಸ್ವಾಮಿ ಅವರನ್ನು ಕೆಳಗಿಳಿಸಲು ಯಾರೂ ಷಡ್ಯಂತ್ರ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರು 2023 ರಲ್ಲಿ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಅಂದಿದ್ದಾರೆ ಹೊರತು ಈಗ ಆಗುತ್ತೇನೆ ಅಂದಿಲ್ಲ.ಈಗ ಆಗುತ್ತೇನೆ ಎಂದು ಎಲ್ಲಾದರೂ ಹೇಳಿದ್ದಾರಾ ಎಂದು ಪ್ರಶ್ನಿಸಿದರು. 

ಸಿದ್ದರಾಮಯ್ಯ ಅವರು ಗೆಳೆಯರಾಗಿರುವ ವೈದ್ಯರೊಬ್ಬರು ಕರೆದ ಹಿನ್ನಲೆಯಲ್ಲಿ ವಿದೇಶಕ್ಕೆ ತೆರಳಿದ್ದಾರೆ. ಮೂರು ನಾಲ್ಕು ತಿಂಗಳ ಹಿಂದೆಯೇ ಅವರ ಪ್ರವಾಸ ನಿಗದಿಯಾಗಿತ್ತು. ಸಿಎಂ ಆದಾಗಲೇ ತೆರಳಬೇಕಾಗಿದ್ದು  ಆದರೆ ಸಾಧ್ಯವಾಗಲಿಲ್ಲ.  ನನ್ನನ್ನು ಕರೆದಿದ್ದರೆ ನಾನೂ ಹೋಗುತ್ತಿದ್ದೆ ಎಂದರು. 

ನಮ್ಮದು ಹೈಕಮಾಂಡ್‌ ಪಕ್ಷ.ಸಿದ್ದರಾಮಯ್ಯ ನಮ್ಮ ನಾಯಕರು, ಅದರಲ್ಲಿ ಎರಡು ಮಾತಿಲ್ಲ ಎಂದರು.

Trending videos

Back to Top