CONNECT WITH US  

ನಾಳೆ PLD ಎಲೆಕ್ಷನ್‌; ಲಕ್ಷ್ಮಿ ಗೆದ್ರೆ ಜಾರಕಿಹೊಳಿ ಉಗ್ರ ತೀರ್ಮಾನ!!

ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ತೀವ್ರ ತಲ್ಲಣ ಮೂಡಿಸಿರುವ ಬೆಳಗಾವಿ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ನಾಳೆ ಶುಕ್ರವಾರ ನಡೆಯಲಿದ್ದು ಕಾಂಗ್ರೆಸ್‌ಗೆ ಆತಂಕ ತಂದಿಟ್ಟಿದೆ. 

ಚುನಾವಣೆ ಸಚಿವ ರಮೇಶ್‌ ಜಾರಕಿಹೊಳಿ,ಸಹೋದರ ಸತೀಶ್‌ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್‌ಕರ್‌ ನಡುವಿನ ಜಿದ್ದಾಜಿದ್ದಿನ ಕದನವಾಗಿದೆ. 

ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್‌ ಜಾರಕಿಹೋಳಿ  ಶಾಸಕಿ ಲಕ್ಷ್ಮಿ ಹೆಬ್ಬಾಳ್‌ಕರ್‌ ವಿರುದ್ಧ ತೀವ್ರ ಕಿಡಿ ಕಾರಿದ್ದು , ಆಕೆಯ ಬಣ ಚುನಾವಣೆಯಲ್ಲಿ ಗೆದ್ದರೆ ನಾವು ಉಗ್ರ ನಿರ್ಣಯ ಕೈಗೊಳ್ಳುವುದಾಗಿ ಕಾಂಗ್ರೆಸ್‌ ಪಕ್ಷಕ್ಕೇ ಎಚ್ಚರಿಕೆ ನೀಡಿದ್ದಾರೆ.  

ಆಕೆ ಜಿಲ್ಲಾಧ್ಯಕ್ಷೆ ಆಗಲು ಸತೀಶ್‌ ಜಾರಕಿಹೊಳಿ ಕಾರಣ. ಅವರ ರಾಜಕೀಯ ಜೀವನ ಆರಂಭವಾಗಿದ್ದು ಅಲ್ಲಿಂದ. ಆಕೆಗೆ ಜಾರಕಿಹೊಳಿ ಕುಟುಂಬಕ್ಕೆ 90 ಕೋಟಿ ರೂಪಾಯಿ ಸಾಲ ಕೊಡುವ ಶಕ್ತಿ ಇದೆ ಎನ್ನುವುದು ಗೊತ್ತಿರಲಿಲ್ಲ. ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದು ಎಂದು ಕಿಡಿ ಕಾರಿದರು. 

ಆಕೆ ನಮ್ಮ ಬಳಿ ಅಳುತ್ತಾ ಬಂದಿದ್ದಳು. ಶಾಸಕಿಯಾದ ಕೂಡಲೆ ಸಚಿವ ಸ್ಥಾನ ಕೇಳುತ್ತಾಳೆ. ಮುಂದಿನ ದಿನಗಳಲ್ಲಿ ಆಕೆಗೆ ರಾಜಕೀಯ ಭವಿಷ್ಯವಿಲ್ಲ ಎಂದರು. 

ಹಣದಿಂದಲೇ ಎಲ್ಲಾ ಆಗುತ್ತದೆ ಎಂದು ಆಕೆಯ ಪಿತ್ತ ನೆತ್ತಿಗೇರಿದೆ. 4 ಬಾರಿ ಶಾಸಕನಾದ ಬಳಿಕ ನಾನು ಸಚಿವನಾದೆ. ಆಕೆಯ ಗಾಡ್‌ಫಾದರ್‌ ಬೆಂಗಳೂರಿನಲ್ಲಿ ಯಾರಿದ್ದಾರೆ ಎಂದು ಗೊತ್ತಿಲ್ಲ ಎಂದು ಕಿಡಿಕಾರಿದರು. 

ಶುಕ್ರವಾರ ಮಧ್ಯಾಹ್ನ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ನಿಗದಿಯಾಗಿದ್ದು ಮಧ್ಯಾಹ್ನವೇ ಫ‌ಲಿತಾಂಶ ಹೊರ ಬೀಳಲಿದೆ. 

ಮುಂದೂಡಿಕೆಯಾಗಿದ್ದ ಚುನಾವಣೆಯನ್ನು ಧಾರವಾಡ ಹೈಕೋರ್ಟ್‌ ತಕ್ಷಣ ನಡೆಸುವಂತೆ ಆದೇಶ ನೀಡಿದ್ದು ರಮೇಶ್‌ ಜಾರಕಿಹೊಳಿಗೆ ಶಾಕ್‌ ನೀಡಿತ್ತು. ಲಕ್ಷ್ಮಿ ಹೆಬ್ಬಾಳ್‌ಕರ್‌ ಅವರಿಗೆ ಚುನಾವಣೆ ಗೆದ್ದಷ್ಟು ಸಂಭ್ರಮ ತಂದಿಟ್ಟಿತ್ತು.
 

Trending videos

Back to Top