CONNECT WITH US  

ಶ್ರೀರಾಮಚಂದ್ರ, ಸೀತೆ ಜತೆ ಮದ್ಯ ಸೇವಿಸುತ್ತಿದ್ದ: ಪ್ರೊ..ಭಗವಾನ್

ದಾವಣಗೆರೆ: ಭಗವದ್ಗೀತೆ ಧರ್ಮ ಗ್ರಂಥವಲ್ಲ. ಅದನ್ನು ಸುಡುತ್ತೇನೆ ಎನ್ನುವ ಮೂಲಕ ವಿವಾದ ಹುಟ್ಟುಹಾಕಿದ್ದ ಚಿಂತಕ, ವಿಚಾರವಾದಿ ಪ್ರೊ. ಕೆ.ಎಸ್‌.ಭಗವಾನ್‌ ಈಗ ಮತ್ತೂಂದು ಬಾಂಬ್‌ ಸಿಡಿಸಿದ್ದಾರೆ.

ಭಗವದ್ಗೀತೆ ಬಿಟ್ಟು ಈ ಬಾರಿ ಮರ್ಯಾದಾ ಪುರುಷೋತ್ತಮ ಎಂದು ಕರೆಸಿಕೊಳ್ಳುವ ಶ್ರೀರಾಮನ ಬಗ್ಗೆ ವಾಗ್ಧಾಳಿ ಮಾಡಿದ್ದಾರೆ. "ಶ್ರೀರಾಮ ದೇವರಲ್ಲ, ರಾಜನೂ ಅಲ್ಲ, ಬೆಳಗ್ಗೆಯೆಲ್ಲ ಪುರಾಣ, ಪುಣ್ಯ ಕಥೆಗಳಲ್ಲಿ ಕಾಲ ಕಳೆಯುತ್ತಿದ್ದ. ಸಂಜೆಯಾಗುತ್ತಲೇ ಆತ ಸೀತೆ ಮತ್ತಿತರ ಸ್ತ್ರೀಯರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದ' ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

ಇಲ್ಲಿನ ಶಾಂತಿ ಪಾರ್ಕ್‌ ಹೋಟೆಲ್‌ ಸಭಾಂಗಣದಲ್ಲಿ ಭಾನುವಾರ ಉಚ್ಚಂಗಿ ಪ್ರಸಾದ್‌ ರ "ಒಡಲ ಕಿಚ್ಚು' ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ರಾಮಾಯಣದಲ್ಲಿನ ಮೊದಲ ಶ್ಲೋಕದಲ್ಲಿಯೇ ನಾರಾಯಣ-ವಾಲ್ಮೀಕಿ ಸಂಭಾಷಣೆ ನಡೆಯುತ್ತದೆ. ಈ ವೇಳೆಯೇ ಶ್ರೀರಾಮ ಮನುಷ್ಯನೇ ಹೊರತು ದೇವರು ಅಲ್ಲವೇ ಅಲ್ಲ ಎಂಬುದು ಗೊತ್ತಾಗುತ್ತದೆ
ಎಂದರು.

ರಾಮ 14 ವರ್ಷ ವನವಾಸದಿಂದ ವಾಪಸ್ಸಾದ ನಂತರವೂ ಸಹೋದರ ಭರತನೇ ರಾಮನ ಹೆಸರಲ್ಲಿ ರಾಜ್ಯಭಾರ ಮಾಡುತ್ತಿರುತ್ತಾನೆ. ರಾಮ ಬೆಳಗ್ಗೆಯೆಲ್ಲಾ ಪುರೋಹಿತರೊಂದಿಗೆ ಕೆಲಸಕ್ಕೆ ಬಾರದ ಪುರಾಣ, ಪುಣ್ಯ ಕತೆಗಳಲ್ಲಿ ಕಾಲ  ಕಳೆಯುತ್ತಿದ್ದ. ಸಂಜೆಯಾಗುತ್ತಲೇ ಸೀತೆ, ಇತರ ಸ್ತ್ರೀಯರೊಂದಿಗೆ ಮದ್ಯ ಸೇವಿಸಿ, ಸೀತೆಗೂ ಕುಡಿಸಿ ಕಾಲ ಕಳೆಯುತ್ತಿದ್ದ. ಹೀಗಾಗಿ ಆತನನ್ನು ಏಕಪತ್ನಿ ವ್ರತಸ್ಥ ಎಂದು ಹೇಳಲಾಗದು ಎಂದು ನುಡಿದರು.

ಸ್ತ್ರೀ ವಿರೋಧಿ ರಾಮ: "ಶ್ರೀರಾಮ ಸ್ತ್ರೀ ವಿರೋಧಿಯಾಗಿದ್ದ. ಅದೇ ಕಾರಣಕ್ಕೆ ಸೀತೆ ತುಂಬು ಗರ್ಭಿಣಿಯಾಗಿದ್ದರೂ ಕಾಡಿಗಟ್ಟಿದ. ಚಾತುರ್ವಣ್ಯ ಪದ್ಧತಿ ಒಪ್ಪಿಕೊಂಡಿದ್ದ. ಪುರೋಹಿತನೋರ್ವ ತನ್ನ ಮಗನ ಸಾವಿಗೆ ಕಾರಣ ಎಂದಿದ್ದಕ್ಕೆ ತಪಸ್ಸಿನ ಮೂಲಕ
ಜ್ಞಾನಾರ್ಜನೆಗೆ ಮುಂದಾದ ಶೂದ್ರ ಶಂಭೂಕನ ಶಿರಚ್ಛೇದನ ಮಾಡಿದ. ಹೀಗಾಗಿ ರಾಮನನ್ನು ಓರ್ವ ಕೊಲೆಗಾರ, ಶೂದ್ರ ವಿರೋಧಿ ಎಂದು ಹೇಳಬಹುದು. ಇದೆಲ್ಲವನ್ನೂ ನಾನು ಈ ಹಿಂದೆಯೇ ನನ್ನ ಪ್ರಬಂಧದಲ್ಲಿ ವಾಲ್ಮೀಕಿಯವರ ಶ್ಲೋಕಗಳ ಮೂಲಕವೇ ವಿವರಿಸಿದ್ದೆ' ಎಂದು ಹೇಳಿದರು.

ದೇವರೇ ಇಲ್ಲ: ಎಲ್ಲಾ ಧರ್ಮದಲ್ಲಿರುವ ಪುರೋಹಿತರಿಂದಾಗಿಯೇ ದೇವರು ಇಂದಿಗೂ ಜೀವಂತವಾಗಿದ್ದಾನೆ. ವಾಸ್ತವದಲ್ಲಿ ದೇವರೇ ಇಲ್ಲ. ಉಪನಿಷತ್ತುಗಳಲ್ಲಿಯೂ ದೇವರ ಬಗ್ಗೆ ಪ್ರಸ್ತಾಪ ಇಲ್ಲ. ನಾವು ಮಂಗಳ, ಚಂದ್ರ ಗ್ರಹಕ್ಕೆ ಹೋಗಿದ್ದೇವೆ. ಅಲ್ಲೆಲ್ಲೋ ಇಂದ್ರಲೋಕ, ಸ್ವರ್ಗ, ನರಕ ಕಂಡಿಲ್ಲ. ಹೀಗಾಗಿ ದೇವರು ಇದ್ದಾನೆ ಎಂಬುದೇ ಸುಳ್ಳು. ಒಂದು ವೇಳೆ ದೇವರು ಇದ್ದದ್ದೇ ಆದರೆ, ದೇವಾಲಯಗಳ ಮೇಲೆ ದಾಳಿ ಮಾಡಿ, ಮೂರ್ತಿಗಳನ್ನು ಒಡೆದು ಹಾಕಿದಾಗ ತನ್ನ ಅಸ್ತಿತ್ವ ತೋರಿಸುತ್ತಿದ್ದ ಎಂದು ಪ್ರತಿಪಾದಿಸಿದರು.

ರಾಮ ಬೆಳಗ್ಗೆಯೆಲ್ಲಾ ಪುರೋಹಿತರೊಂದಿಗೆ ಕೆಲಸಕ್ಕೆ ಬಾರದ ಪುರಾಣ, ಪುಣ್ಯ ಕತೆಗಳಲ್ಲಿ ಕಾಲ ಕಳೆಯುತ್ತಿದ್ದ. ಸಂಜೆಯಾಗುತ್ತಲೇ ಸೀತೆ, ಇತರ ಸ್ತ್ರೀಯರೊಂದಿಗೆ ಮದ್ಯ ಸೇವಿಸಿ, ಸೀತೆಗೂ ಕುಡಿಸಿ ಕಾಲ ಕಳೆಯುತ್ತಿದ್ದ. ಆತನನ್ನು ಏಕಪತ್ನಿ ವ್ರತಸ್ಥ ಎಂದು ಹೇಳಲಾಗದು.
*ಪ್ರೊ.ಕೆ.ಎಸ್‌. ಭಗವಾನ್‌, ಚಿಂತಕ, ವಿಚಾರವಾದಿ

Trending videos

Back to Top