CONNECT WITH US  

ಇಂದು ಚಂದ್ರಗ್ರಹಣ: 30 ನಿಮಿಷ ಗೋಚರ

ಉಡುಪಿ: ಚೈತ್ರ ಶುದ್ಧ ಪೂರ್ಣಿಮೆ, ಶನಿವಾರ ಮನ್ಮಥ ಸಂವತ್ಸರದ ಮೊದಲ ಚಂದ್ರಗ್ರಹಣ ಗೋಚರಿಸಲಿದೆ.

ಭಾರತದಲ್ಲಿ ಚಂದ್ರೋದಯಕ್ಕೂ ಮೊದಲೇ ಖಗ್ರಾಸ ಮುಗಿದು, ಖಂಡಗ್ರಾಸ ಮಾತ್ರ ಗೋಚರಿಸಲಿದೆ. ಗ್ರಹಣ ಮಧ್ಯಾಹ್ನ 3.45ಕ್ಕೆ ಪ್ರಾರಂಭಗೊಂಡರೂ ಸೂರ್ಯಾಸ್ತವಾಗುತ್ತಿದ್ದಂತೆ ನಮಗೆ ಗೋಚರಿಸಲಿದೆ. ಸಂಜೆ 6.44ರ ನಂತರ 7.14ರ ವರೆಗೆ, ಒಟ್ಟು 30 ನಿಮಿಷ ಗ್ರಹಣ ಗೋಚರವಾಗಲಿದೆ.

ಶಾಂತಸಾಗರ, ಅಲಾಸ್ಕ್, ಪೂರ್ವ ಆಸ್ಟ್ರೇಲಿಯ, ನ್ಯೂಜಿಲೆಂಡ್‌, ಜಪಾನ್‌ ದೇಶಗಳಲ್ಲಿ ಚಂದ್ರಗ್ರಹಣ ಖಗ್ರಾಸವಾಗಿ, ಪಶ್ಚಿಮ ಹಾಗೂ ಉತ್ತರ ಅಮೆರಿಕದ ಜನರಿಗೆ ಕೊನೆಯ ಕ್ಷಣಗಳು, ಮಧ್ಯ ಮತ್ತು ಪೂರ್ವ ಏಷ್ಯಾಗೆ ಅಂತಿಮ ಕ್ಷಣಗಳು ಮಾತ್ರ ಗೋಚರವಾಗಲಿದೆ.

Trending videos

Back to Top